೧.೪೦೦ ಕಿಲೋ ಗಾಂಜಾ ಸಹಿತ ಇಬ್ಬರ ಬಂಧನ

0
22

ಕುಂಬಳೆ: ಕುಂಬಳೆಯಲ್ಲಿ ಪೊಲೀಸ್ ಹಾಗೂ ಅಬಕಾರಿ ಅಧಿಕಾರಿಗಳು ನಡೆಸಿದ ಕಾರ್ಯಾಚ ರಣೆಯಲ್ಲಿ ೧.೪೦೦ ಕಿಲೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಿ, ಕಾರು ಕಸ್ಟಡಿಗೆ ತೆಗೆಯಲಾಗಿದೆ.

ಬಂದ್ಯೋಡು ನಿವಾಸಿ ಅಬ್ದುಲ್ ಜಲೀಲ್(೨೯), ಎರಿಯಾಲ್ ಲಕ್ಷಂವೀಡ್ ಕಾಲನಿ ನಿವಾಸಿ ಉದಯನ್(೪೨) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ.

ಕುಂಬಳೆ ಇನ್‌ಸ್ಪೆಕ್ಟರ್ ಕೆ. ಪ್ರೇಮ್‌ಸದನ್ ನೇತೃತ್ವದ ಪೊಲೀಸರು  ನಿನ್ನೆ ರಾತ್ರಿ ಆರಿಕ್ಕಾಡಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆಗಮಿಸಿದ ಆಲ್ಟೋ ಕಾರನ್ನು ನಿಲ್ಲಿಸಲು ಸೂಚಿಸಲಾಗಿದೆ. ಆದರೆ ಕಾರು ನಿಲ್ಲದೆ ಪರಾರಿಯಾಗಿದ್ದು, ಇದರಿಂದ ಅರ್ಧಕಿಲೋ ಮೀಟರ್‌ವರೆಗೆ ಬೆನ್ನಟ್ಟಿ ತಡೆದು ನಿಲ್ಲಿಸಲಾಗಿದೆ. ಈ ಕಾರಿನಲ್ಲಿದ್ದ ಬಂದ್ಯೋಡಿನ ಅಬ್ದುಲ್  ಜಲೀಲ್‌ನನ್ನು ಕಸ್ಟಡಿಗೆ ತೆಗೆದು ಕಾರನ್ನು ಪರಿಶೀಲಿಸಿದಾಗ ೭೫೦ ಗ್ರಾಂ ಗಾಂಜಾ ಪತ್ತೆಯಾಗಿದೆ. ಎಸ್.ಐ ಟಿ.ವಿ. ಅಶೋಕನ್, ಪೊಲೀಸರಾದ ಪ್ರದೀಶ್ ಗೋಪಾಲ್, ಸಜಿತ್, ಮಧುಸೂದನ್ ಕಾರ್ಯಾಚರಣೆಗೆ ಸಹಕರಿಸಿದ್ದಾರೆ.

ಅಬಕಾರಿ ಅಧಿಕಾರಿಗಳು ಇಂದು ಬೆಳಿಗ್ಗೆ ಪೇರಾಲ್ ಮೈಮೂನ ನಗರದಲ್ಲ್ಲಿ ಕಾರ್ಯಾಚರಣೆ ನಡೆಸಿ ೬೫೦ ಗ್ರಾಂ ಗಾಂಜಾ ವಶಪಡಿಸಿದ್ದಾರೆ. ಈ ಸಂಬಂಧ ಎರಿಯಾಲ್ ಲಕ್ಷಂವೀಡು ಕಾಲನಿಯ ಉದಯನ್‌ನನ್ನು ಬಂಧಿಸಲಾಗಿದೆ.

NO COMMENTS

LEAVE A REPLY