ವರ್ಕಾಡಿಯಲ್ಲಿ ಘರ್ಷಣೆ: ಎಂಟು ಮಂದಿ ಸಿಪಿಎಂ, ಡಿವೈಎಫ್‌ಐ ಕಾರ್ಯಕರ್ತರು ಜಖಂ; ೧೧ ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸು

0
40

ಮಂಜೇಶ್ವರ: ವರ್ಕಾಡಿಯಲ್ಲಿ ನಿನ್ನೆ ಸಂಜೆ ನಡೆದ ಘರ್ಷಣೆಯಲ್ಲಿ ಎಂಟು ಮಂದಿ ಸಿಪಿಎಂ, ಡಿವೈಎಫ್‌ಐ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಘಟನೆ ಸಂಬಂಧ ೧೧ ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಿಕೊಂಡಿರುವುದಾಗಿ ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ.

ಪಾವೂರು ಪೊಯ್ಯೆ ನಿವಾಸಿಯೂ, ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಸದಸ್ಯ ಡಿ. ಬೂಬ (೫೦),  ಮಾಜಿ ಪಂ. ಸದಸ್ಯೆ ಹರಿಣಾಕ್ಷಿ (೪೮)ವರ್ಕಾಡಿ ಲೋಕಲ್ ಸೆಕ್ರೆಟರಿ ನವೀನ್ ಕುಮಾರ್ (೩೨), ಡಿವೈಎಫ್‌ಐ ವರ್ಕಾಡಿ ವಿಲ್ಲೇಜ್ ಸೆಕ್ರೆಟರಿ ಮಹೇಶ್ (೩೨), ಪೊಯ್ಯೆ ಯೂನಿಟ್ ಸೆಕ್ರೆಟರಿ ಅಕ್ಷಯ್ ಕುಮಾರ್ (೨೩), ವರ್ಕಾಡಿ ಲೋಕಲ್ ಸಮಿತಿ ಸದಸ್ಯ ಚರಣ್‌ರಾಜ್ (೨೩), ನಿತಿನ್ (೧೯), ದೀಕ್ಷಿತ್ (೧೮), ಎಂಬಿವರು ಘರ್ಷಣೆಯಲ್ಲಿ ಗಾಯಗೊಂಡವರಾಗಿದ್ದಾರೆ. ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ನಿನ್ನೆ ಸಂಜೆ ೭ ಗಂಟೆ ವೇಳೆ ವರ್ಕಾಡಿ ಶ್ರೀ ಚಾಮುಂಡೇಶರಿ ಭಜನಾ ಮಂದಿ ರದಲ್ಲಿ ನಡೆದ ಪೂಜೆಯಲ್ಲಿ ಭಾಗವಹಿಸಿ ಡಿ. ಬೂಬ ಹಾಗೂ ಪತ್ನಿ ಹರಿಣಾಕ್ಷಿ ಮನೆಗೆ ಮರಳಿದ್ದಾರೆನ್ನಲಾಗಿದೆ. ಬಳಿಕ ನವೀನ್ ಕುಮಾರ್, ಮಹೇಶ್, ಅಕ್ಷಯ ಕುಮಾರ್, ಚರಣ್‌ರಾಜ್, ನಿತಿನ್, ದೀಕ್ಷಿತ್ ಎಂಬಿವರು ನವರಾತ್ರಿ ಪೂಜೆ ಪ್ರಯುಕ್ತ ಭಜನಾ ಮಂದಿರ ಶುಚೀಕರಣ ಕೆಲಸ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಮಾರಕಾಯುಧಗಳೊಂದಿಗೆ ತಲುಪಿದ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರು ಆಕ್ರಮಿಸಿದ್ದಾರೆಂದೂ  ಈ ವೇಳೆ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಡಿ. ಬೂಬರ ಮನೆಗೆ ಓಡಿದಾಗ ತಂಡ ಅಲ್ಲಿಗೂ ತಲುಪಿ ಆಕ್ರಮಣ ನಡೆಸಿದೆಯೆಂದು ಗಾಯಾಳುಗಳು ಆರೋಪಿಸಿದ್ದಾರೆ. ಘಟನೆ ಸಂಬಂಧ ಡಿ. ಬೂಬ ನೀಡಿದ ದೂರಿನಂತೆ ಬಿಜೆಪಿ ಕಾರ್ಯಕv ರಾದ ಕಿರಣ್ (೨೩), ಅಂಕಿತ್ (೨೩), ಧೀರಜ್ (೨೩), ಶೋಭಿತ್ (೨೩), ಸಜಿತ್ (೨೩), ಭರತ್ (೨೫), ಕೀರ್ತನ್ (೨೫), ವಿಜಂತ್ (೨೫) ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇತರ ಮೂವರ ವಿರುದ್ಧ ಕೇಸು ದಾಖಲಿಸಿಕೊಂಡಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.

ಮನೆಗೆ ನುಗ್ಗಿ ತನಗೆ ಹಾಗೂ ಸ್ನೇಹಿತರಿಗೆ ಆಕ್ರಮಿಸಿದ ತಂಡ ಕೊಲೆ ಬೆದರಿಕೆಯೊಡ್ಡಿರುವುದಾಗಿ ಡಿ. ಬೂಬ ಆರೋಪಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸರು ಕಾವಲು ಏರ್ಪಡಿಸಿದ್ದಾರೆ.

NO COMMENTS

LEAVE A REPLY