ಶಬರಿಮಲೆ ಮರುಪರಿಶೀಲನಾ ಅರ್ಜಿ ತುರ್ತು ಪರಿಗಣನೆ ಇಲ್ಲ-ಸುಪ್ರೀಂಕೋರ್ಟ್

0
44

ಹೊಸದಿಲ್ಲಿ: ಶಬರಿಮಲೆ ಕ್ಷೇತ್ರಕ್ಕೆ ಎಲ್ಲಾ ವಯೋಮಿತಿಯ ಯುವತಿಯರಿಗೆ ಪ್ರವೇಶಾವಕಾಶ ನೀಡಿರುವ ತೀರ್ಪನ್ನು ಮರುಪರಿಶೀಲಿಸಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ತುರ್ತಾಗಿ ಪರಿಗಣಿಸುವಂತಿಲ್ಲವೆಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಇಂದು ಬೆಳಿಗ್ಗೆ ಸ್ಪಷ್ಟಪಡಿಸಿದ್ದಾರೆ.

ಸಾಧಾರಣ ಕ್ರಮ ಪ್ರಕಾರವಾಗಿ ಮಾತ್ರವೇ ಶಬರಿಮಲೆ ಮರುಪರಿಶೀಲನಾ ಅರ್ಜಿಯನ್ನು ಪರಿಗಣಿಸಲು ಸಾಧ್ಯವೆಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ. ಶಬರಿಮಲೆಗೆ  ಪ್ರಾಯಮಿತಿಯಿಲ್ಲದೆ ಮಹಿಳೆಯರಿಗೆ ಪ್ರವೇಶ ನೀಡುವ ತೀರ್ಪಿನ ವಿರುದ್ಧ ಕೇರಳಾದ್ಯಂತ ಭಾರೀ ಪ್ರತಿಭಟನೆ ತಲೆಯೆತ್ತಿದೆ. ಆ ಹಿನ್ನೆಲೆಯಲ್ಲಿ ಮರುಪರಿ ಶೀಲನಾ ಅರ್ಜಿಗಳನ್ನು ಶಬರಿಮಲೆಯ ತುಲಾಮಾಸದ ಪೂಜೆ ಮೊದಲು  ತುರ್ತಾಗಿ ಪರಿಶೀಲಿಸಬೇಕೆಂದು ಕೋರಿ ಸುಪ್ರೀಂಕೋರ್ಟ್ ಗೆ ಹಲವರು ಅರ್ಜಿ ಸಲ್ಲಿಸಿದ್ದರು. ಅದನ್ನು  ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಇಂದು ಬೆಳಿಗ್ಗೆ ಪರಿಶೀಲಿಸಿ ತುಲಾಮಾಸ ಪೂಜೆ ಮೊದಲು ಅರ್ಜಿ ಪರಿಶೀಲಿಸುವಂತಿಲ್ಲ. ತುಲಾ ಮಾಸದ ಪೂಜೆ ಬಳಿಕವೂ ಶಬರಿಮಲೆ. ಬಾಗಿಲು ತೆರೆಯುವುದಿಲ್ಲವೇ ಎಂದು ಪ್ರಶ್ನಿಸಿದ್ದರು.

ಸುಪ್ರೀಂಕೋರ್ಟ್‌ನ ಈ ತೀ ರ್ಮಾನದಿಂದ ಮರುಪರಿಶೀಲನಾ ಅರ್ಜಿ ಪರಿಗಣನೆಗೆ ವಿಳಂಬವಾಗಲಿದೆಯೆಂಬುದು ಸ್ಪಷ್ಟವಾಗಿದೆ. ಅದರಿಂದ ಶಬರಿಮಲೆಯ ತುಲಾ ಮಾಸದ ಪೂಜಾ ಕ್ರಮಗಳು ಸುಪ್ರೀಂಕೋರ್ಟ್‌ನ ತೀರ್ಪನ್ನು ಪಾಲಿಸಿಕೊಂಡು ಸಾಗುವಂತೆ ಮಾಡಿದೆ.

NO COMMENTS

LEAVE A REPLY