ವರ್ಕಾಡಿ ಘರ್ಷಣೆ: ಸಿಪಿಎಂ ನೀಡಿದ ದೂರಿನಂತೆ ಇಬ್ಬರು ಬಿಜೆಪಿ ಕಾರ್ಯಕರ್ತರ ಸೆರೆ

0
41

ಉಪ್ಪಳ: ಸಿಪಿಎಂ ಕಾರ್ಯಕರ್ತರಿಗೆ ಆಕ್ರಮಣ ನಡೆಸಿದರೆಂದು ಆರೋಪಿಸಿ ನೇತಾರ ಡಿ. ಬೂಬ ಮಂಜೇಶ್ವರ ಠಾಣೆಗೆ ನೀಡಿದ ದೂರಿನಂತೆ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಸೆರೆಹಿಡಿಯಲಾಗಿದೆ. ಪಾವೂರು ತಚ್ಚಿರೆ ನಿವಾಸಿಗಳಾದ ಭರತ್‌ರಾಜ್ (೨೫), ವಿಜೇಶ್ (೨೩)ರನ್ನು ನಿನ್ನೆ ಸೆರೆ ಹಿಡಿಯಲಾಗಿದ್ದು, ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

೭ರಂದು ಸಂಜೆ ೭ ಗಂಟೆಗೆ ವರ್ಕಾಡಿ ಶ್ರೀ ಚಾಮುಂಡೇಶ್ವರಿ ಭಜನಾ ಮಂದಿರ ಪರಿಸರ ಶುಚೀಕರಿ ಸುತ್ತಿದ್ದ ವೇಳೆ ಮಾರಕಾಯುಧ ಗಳೊಂದಿಗೆ ತಲುಪಿದ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರು ಆಕ್ರಮಣ ನಡೆಸಿದ್ದು,  ಅಲ್ಲಿಂದ ಓಡಿ ನೇತಾರ ಡಿ. ಬೂಬರ ಮನೆಗೆ ಸೇರಿಕೊಂಡಾಗ ಅಲ್ಲಿಗೂ ತಲುಪಿ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು ೧೧ ಮಂದಿ ವಿರುದ್ಧ ಕೇಸು ದಾಖಲಿಸಲಾಗಿದ್ದು, ಇದರಲ್ಲಿ ಇಬ್ಬರನ್ನು ಸೆರೆಹಿಡಿಯಲಾಗಿದೆ. ಘಟನೆಯಲ್ಲಿ ಸಿಪಿಎಂ, ಡಿವೈಎಫ್‌ಐ ಕಾರ್ಯಕರ್ತರಾದ ಎಂಟು ಮಂದಿ ಗಾಯಗೊಂಡಿದ್ದು, ಇವರು ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು.

NO COMMENTS

LEAVE A REPLY