ಬೆಂಕಿ ತಗಲಿ ಯುವತಿ ಮೃತ್ಯು

0
29

ಕಾಸರಗೋಡು: ಮನೆಯಲ್ಲಿ ಅಡುಗೆ ನಿರತರಾಗಿದ್ದ ವೇಳೆ ಉಟ್ಟ ಬಟ್ಟೆಗೆ ಅಕಸ್ಮಾತ್ ಬೆಂಕಿ ತಗಲಿ ಯುವತಿ ಸುಟ್ಟು ಗಾಯಗೊಂಡು ಸಾವನ್ನಪ್ಪಿದ ಘಟನೆ ನಡೆದಿದೆ. ಪೆರಿಯ ಎಚ್ಚಿತ್ತಡ್ಕದ ಗೋಪಾಲನ್ ಎಂಬವರ ಪತ್ನಿ ಚಾಲಂಗಾಯ ವನಿತಾ ಸಹಕಾರಿ ಸಂಘದ ಡೆಪೋಸಿಟ್ ಕಲೆಕ್ಟರ್ ಎಂ.ಪಿ. ರಜಿತ(೩೮) ಸಾವನ್ನಪ್ಪಿದ ಯುವತಿ.

ಕಳೆದ ರವಿವಾರದಂದು ರಜಿತ  ಅಡುಗೆಯಲ್ಲಿ ತೊಡಗಿದ್ದ ವೇಳೆ ಬೆಂಕಿ ತಗಲಿಕೊಂಡಿತ್ತು. ಗಂಭೀರ ಸುಟ್ಟ ಗಾಯಗೊಂಡ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೆ ನಿನ್ನೆ ಮೃತಪಟ್ಟ ರು.  ಚೆರುಪುಳ ಪ್ರೊಪಾಯಿಲ್ ಅಂಬು-ದೇವಕಿ ಪುತ್ರಿಯಾಗಿರುವ ಮೃತರು ಪತಿ, ಪುತ್ರ ಗೋಪಾಲ್(೭) ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಬೇಕಲ ಪೊಲೀಸರು ತನಿಖೆ ನಡೆಸಿದರು.

NO COMMENTS

LEAVE A REPLY