ಕೇಂದ್ರೀಯ ವಿ.ವಿಯಿಂದ ಅಮಾನತುಗೈದ ಎಸ್.ಎಫ್.ಐ ಕಾರ್ಯಕರ್ತ ಕೈ ನರ ಕತ್ತರಿಸಿ ಆತ್ಮಹತ್ಯೆಗೆ ಯತ್ನ

0
29

ಕಾಸರಗೋಡು: ಪೆರಿಯದ ಕೇಂದ್ರೀಯ  ವಿಶ್ವವಿದ್ಯಾಲಯದಿಂದ ಹೊರಹಾಕಲ್ಪಟ್ಟ ಎಸ್.ಎಫ್.ಐ ಕಾರ್ಯಕರ್ತ ಕೈಯ ನರ ಕತ್ತರಿಸಿ ಆತ್ಮಹತ್ಯೆಗೈಯ್ಯಲೆತ್ನಿಸಿದ ಘಟನೆ ನಡೆದಿದೆ.

ತೃಶೂರು ಅಂಬಲ್ಲೂರು ನಿವಾಸಿಯೂ ಕೇಂದ್ರೀಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾದ ಅಖಿಲ್ ತಾಯತ್ತ್(೨೫) ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈತನನ್ನು ಕಾಞಂಗಾಡ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಈತ ವಿಶ್ವವಿದ್ಯಾಲಯ ವಿರುದ್ಧವಾಗಿ ಹೇಳಿಕೆಗಳನ್ನು ತನ್ನ ಫೇಸ್‌ಬುಕ್‌ನಲ್ಲಿ ಪ್ರಚಾರಪಡಿಸಿದ್ದನು. ಈ ಹಿನ್ನೆಲೆಯಲ್ಲಿ ಈತನನ್ನು ವಿಶ್ವವಿದ್ಯಾಲಯದಿಂದ ಅಮಾನತುಗೊಳಿಸಲಾಗಿತ್ತು. ಅನಂತರ ಈತ ಪೆರಿಯದ ಸ್ನೇಹಿತನ ಮನೆಯಲ್ಲಿ ವಾಸಿಸುತ್ತಿದ್ದನು. ಇಂದು ಬೆಳಿಗ್ಗೆ ಈತ ವಿಶ್ವವಿದ್ಯಾಲಯ ಬಳಿಯ ಹೆಲಿಪ್ಯಾಡ್‌ನಲ್ಲಿ ತನ್ನ ಎಡ ಕೈಯ ನರವನ್ನು ಕತ್ತರಿಸಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಕೂಡಲೇ ಆತನನ್ನು ಆಸ್ಪತ್ರೆಗೆ ತಲುಪಿಸಲಾಗಿದೆ.

NO COMMENTS

LEAVE A REPLY