ನಾಲ್ಕು ಮಂದಿ ವಿರುದ್ಧ ಹತ್ಯೆಯತ್ನ ಪ್ರಕರಣ; ಆರೋಪಿಗಳಿಗಾಗಿ ಶೋಧ ಯುವಕನನ್ನು ಕಾರಿನಲ್ಲಿ ಅಪಹರಿಸಿ ಮಾರಣಾಂತಿಕ ಆಕ್ರಮಣ: ಹಣ, ಮೊಬೈಲ್ ದರೋಡೆ

0
60

 

ಬದಿಯಡ್ಕ: ಯುವಕನನ್ನು ತಂಡವೊಂದು ಕಾರಿನಲ್ಲಿ ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಐದು ಲಕ್ಷ ರೂಪಾಯಿ ಬೇಡಿಕೆಯೊಡ್ಡಿ ಮಾರಣಾಂತಿಕವಾಗಿ ಆಕ್ರಮಿಸಿದ ಬಳಿಕ ಮೊಬೈಲ್ ಫೋನ್ ಹಾಗೂ ಪರ್ಸ್‌ನೊಂದಿಗೆ ಪರಾರಿಯಾದ ಬಗ್ಗೆ ದೂರಲಾಗಿದೆ. ಆಕ್ರಮಣದಲ್ಲಿ ಗಂಭೀರ ಗಾಯಗೊಂಡಿರುವ ಯುವಕ ಮಂ ಗಳೂರಿನ ಆಸ್ಪತ್ರೆಯಲ್ಲಿ ದಾಖಲಾ ಗಿದ್ದಾನೆ. ಘಟನೆ ಕುರಿತು ನಾಲ್ಕು ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ನೆಲ್ಲಿಕಟ್ಟೆ ಬಳಿಯ ಚೆನ್ನಡ್ಕ ಆಯಿಷಾ ಮಂಜಿಲ್ ನಿವಾಸಿ ಅಬ್ದುಲ್ ನೌಶಾದ್ ಯಾನೆ ಕಾಟಿ ನೌಶಾದ್(೨೯)  ಆಕ್ರಮಣದಲ್ಲಿ ಗಾಯಗೊಂಡ ಯುವಕನಾಗಿದ್ದಾನೆ. ಈತನಿಗೆ ಆಕ್ರಮಣಗೈದ ಆರೋಪದಂತೆ ನೆಲ್ಲಿಕಟ್ಟೆ ನಿವಾಸಿಗಳಾದ ಬದರುದ್ದೀನ್, ಸಫ್ವಾನ್, ಸಮದಾನಿ ಯಾನೆ ಕೋಬ್ರ ಸಮದಾನಿ ಹಾಗೂ ಇನ್ನೋರ್ವನ ವಿರುದ್ಧ ಪೊಲೀಸರು ಅಪಹರಣ, ದರೋಡೆ, ಆಕ್ರಮಣ, ಹತ್ಯೆಯತ್ನ ಮೊದಲಾದ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಆರೋಪಿಗಳಿಗಾಗಿ ವಿವಿಧೆಡೆ ದಾಳಿ ನಡೆಸಿದರೂ ಪತ್ತೆಹಚ್ಚಲಾಗಲಿಲ್ಲ ವೆಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರಿಗೆ ಲಭಿಸಿದ ದೂರು ಈ ರೀತಿಯಿದೆ: ಈ ತಿಂಗಳ ೮ರಂದು ಸಂಜೆ ೬ ಗಂಟೆಗೆ ಅಬ್ದುಲ್ ನೌಶಾದ್ ಯಾನೆ ಕಾಟಿ ನೌಶಾದ್‌ನನ್ನು ನೆಲ್ಲಿಕಟ್ಟೆಯಿಂದ ನಾಲ್ಕು ಮಂದಿ ತಂಡ ಕಾರಿನಲ್ಲಿ ಅಪಹರಿಸಿದೆ. ಬಳಿಕ ಮಧೂರು ಪರಕ್ಕಿಲ ಬಳಿಯ ಫರ್ನಿಚರ್ ಅಂಗಡಿಯೊಂದರ ಹಿಂಭಾಗದಲ್ಲಿ ಜನವಾಸವಿಲ್ಲದ ಕೊಠಡಿಗೆ ಕೊಂಡೊಯ್ದು ಐದು ಲಕ್ಷ ರೂಪಾಯಿ ನೀಡಬೇಕೆಂದು ಬೇಡಿಕೆಯೊಡ್ಡಿದೆ. ಹಣವಿಲ್ಲವೆಂದು ಅಬ್ದುಲ್ ನೌಶಾದ್ ತಿಳಿಸಿದಾಗ ತಂಡ ಮಾರಣಾಂತಿಕವಾಗಿ ಆಕ್ರಮಣ ನಡೆಸಿದೆ. ಇದರಿಂದ ಅಬ್ದುಲ್ ನೌಶಾದ್ ಪ್ರಜ್ಞೆತಪ್ಪಿ ಬಿದ್ದಾಗ ಆತನ ಮೊಬೈಲ್ ಫೋನ್ ಹಾಗೂ ಹಣವಿದ್ದ ಪರ್ಸನ್ನು ತಂಡ ದೋಚಿ ಪರಾರಿಯಾಗಿದೆ. ರಾತ್ರಿ ೧೨ ಗಂಟೆ ವೇಳೆ ಕೊಠಡಿಯಿಂದ ಹೊರಗೆ ಬಂದ ಅಬ್ದುಲ್ ನೌಶಾದ್ ನಿನ್ನೆ ಮುಂಜಾನೆ ೫ ಗಂಟೆವರೆಗೆ ಅಲ್ಲಿ ಕುಳಿತು, ಬಳಿಕ ಉಳಿಯತ್ತಡ್ಕಕ್ಕೆ ಬಂದು ಬೇರೊಬ್ಬರ ಮೊಬೈಲ್‌ನಿಂದ ಕರೆ ಮಾಡಿ ಘಟನೆ ಬಗ್ಗೆ ತಂದೆಗೆ ತಿಳಿಸಿದ್ದಾನೆ. ಬಳಿಕ ತಂದೆ ತಲುಪಿ ಆತನನ್ನು ಮೊದಲು ಕಾಸರಗೋಡಿನ ಆಸ್ಪತ್ರೆಗೂ ಬಳಿಕ ಮಂಗಳೂರಿನ ಆಸ್ಪತ್ರೆಗೆ ತಲುಪಿಸಲಾ ಗಿದೆ ಎಂದು ದೂರಲಾಗಿದೆ. ಘಟನೆ ಸಂಬಂಧ ಆರೋಪಿಗಳಾದ ನಾಲ್ಕು ಮಂದಿಗಾಗಿ ವಿವಿಧೆಡೆ ಶೋಧ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗಾಂಜಾ ವ್ಯವಹಾರವೇ ಈ ಆಕ್ರಮಣಕ್ಕೆ ಕಾರಣವಾಗಿ ದೆಯೆಂದೂ ಪೊಲೀಸರು ತಿಳಿಸಿದ್ದಾರೆ. ತಿಂಗಳ ಹಿಂದೆ ಆಂಧ್ರಪ್ರದೇಶದಿಂದ ಕಾರಿನಲ್ಲಿ ಸಾಗಿಸುತ್ತಿದ್ದ ಐದು ಲಕ್ಷ ರೂಪಾಯಿ ಮೌಲ್ಯದ ಗಾಂಜಾವನ್ನು ಅಲ್ಲಿನ ಪೊಲೀಸರು ವಶಪಡಿಸಿಕೊಂಡಿದ್ದರು. ಈ ಗಾಂಜಾ ಅಬ್ದುಲ್ ನೌಶಾದ್‌ಗೆ ಆಕ್ರಮಣಗೈದ ತಂಡಕ್ಕೆ ಸೇರಿದ್ದೆಂದು ಅಂದಾಜಿಸಲಾಗಿದೆ. ಗಾಂಜಾ ಸಾಗಾಟ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವುದು ಅಬ್ದುಲ್ ನೌಶಾದ್ ಆಗಿದ್ದಾನೆಂಬ ಸಂಶಯವೇ ಆಕ್ರಮಣಕ್ಕೆ ಕಾರಣವೆಂದೂ ಪೊಲೀಸರು ತಿಳಿಸುತ್ತಿದ್ದಾರೆ.

NO COMMENTS

LEAVE A REPLY