ಶಬರಿಮಲೆ: ರಾಜ್ಯದ ಇನ್ನೂರು ಕೇಂದ್ರಗಳಲ್ಲಿ ರಸ್ತೆ ತಡೆ; ಎನ್.ಡಿ.ಎ. ಲೋಂಗ್ ಮಾರ್ಚ್ ಪಂದಳಂನಿಂದ ಆರಂಭ

0
28

ತಿರುವನಂತಪುರ: ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಿತಿಯ ಮಹಿಳೆಯರಿಗೆ ಪ್ರವೇಶಾವಕಾಶ ನೀಡಿದ ಸುಪ್ರೀಂಕೋರ್ಟ್   ತೀರ್ಪನ್ನು ಜ್ಯಾರಿ ಗೊಳಿಸಲು ಯತ್ನಿಸುತ್ತಿರುವ ರಾಜ್ಯ ಸರಕಾರದ ನೀತಿಯನ್ನು ಪ್ರತಿಭಟಿಸಿ  ಕಾಸರಗೋಡು ಜಿಲ್ಲೆ ಸೇರಿದಂತೆ ರಾಜ್ಯದ ಇನ್ನೂರು ಕೇಂದ್ರಗಳಲ್ಲಿ ವಿವಿಧ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಇಂದು ಬೆಳಿಗ್ಗೆ ೧೧ರಿಂದ ೨ ಗಂಟೆ ತನಕ ರಸ್ತೆ ತಡೆ ಚಳವಳಿ ನಡೆಸಲಾಯಿತು. ಹಲವು ಧಾರ್ಮಿಕ ನೇತಾರರು ಮಹಿಳೆಯರು ಸೇರಿದಂತೆ ಸಹ ಸ್ರಾರು ಮಂದಿ ಇದರಲ್ಲಿ ಭಾಗವಹಿಸಿದರು.

  ಬಿಜೆಪಿ ನೇತೃತ್ವದ ಎನ್.ಡಿ.ಎ ಆಶ್ರಯದಲ್ಲಿ ಪಂದಳಂನಿಂದ ತಿರುವನಂತಪುರದ ಸೆಕ್ರೆಟರಿಯೇಟ್ ತನಕ ನಡೆಸಲಾಗುವ ಲೋಂಗ್ ಮಾರ್ಚ್ ಇಂದು ಬೆಳಿಗ್ಗೆ ಪಂದಳಂನಿಂದ ಆರಂಭಗೊಂಡಿತು. ಎಸ್.ಎನ್.ಡಿ.ಪಿ ಯೋಗಂ ಪ್ರಧಾನ ಕಾರ್ಯದರ್ಶಿ ವೆಳ್ಳಾಪಳ್ಳಿ ನಟೇಶನ್ ನಿಲುವಿಗೆ ವಿರುದ್ಧವಾಗಿ ಬಿಡಿಜೆಎಸ್ ಅಧ್ಯಕ್ಷ ತುಷಾರ್ ವೆಳ್ಳಾಪಳ್ಳಿ ಎನ್.ಡಿ.ಎಯ ಇಂದಿನ ಲೋಂಗ್ ಮಾರ್ಚ್‌ನಲ್ಲಿ ಭಾಗವಹಿಸಿದ್ದಾರೆ.   ಬಿಜೆಪಿ ನಡೆಸುತ್ತಿರುವ ಹೋರಾಟ ಕೇವಲ ರಾಜಕೀಯ ಲಾಭಗಿಟ್ಟಿಸುವ ಯತ್ನವಾಗಿದೆ. ಅದು ಎನ್.ಎಸ್.ಎಸ್ ಪ್ರಾಯೋಜಿತ ಹೋರಾಟವೂ ಆಗಿದೆ ಎಂದು ಎಸ್.ಎನ್.ಡಿ.ಪಿ ಪ್ರಧಾನ ಕಾರ್ಯದರ್ಶಿ ವೆಳ್ಳಾಪಳ್ಳಿ ನಟೇಶನ್ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶಬರಿಮಲೆ ವಿಷಯದಲ್ಲಿ ಘರ್ಷಣೆ ವಾತಾವರಣ ಸೃಷ್ಟಿಸಲೆತ್ನಿಸಿದ್ದಲ್ಲಿ ಎಸ್.ಎನ್.ಡಿ.ಪಿ ಕೈಕಟ್ಟಿ ನಿಂತು ನೋಡದು. ಅಂತಹ ಯತ್ನದ ವಿರುದ್ಧ ಕೆಳಸ್ತರದಿಂದಲೇ ಪ್ರಚಾರ ನಡೆಸುವುದು, ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಅನುಸರಿಸಬೇಕಾಗಿರು ವುದು ಎಲ್ಲರ ಹೊಣೆಗಾರಿಕೆಯಾಗಿದೆ. ರಾಜ್ಯ ಸರಕಾರ ಅದನ್ನು ನಿರ್ವಹಿಸುತ್ತದೆ. ಈ ವಿಷಯದಲ್ಲಿ ಮುಖ್ಯಮಂತ್ರಿಯವರು ತಮ್ಮ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿ ದ್ದಾರೆ. ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಮುಖ್ಯ ಮಂತ್ರಿ ಆಹ್ವಾನ ನೀಡಿದರೂ ಅದಕ್ಕೆ ಸಂಬಂಧಪಟ್ಟ ಸಂಘಟನೆಗಳು ತಯಾರಾಗದಿರುವು ದು ನಿಜಕ್ಕೂ ಆಶ್ಚರ್ಯವಾಗಿದೆ. ಮುಖ್ಯಮಂತ್ರಿ  ಆದ್ಯತೆ ನೀಡಿ ಎಲ್ಲಾ ಹಿಂದೂ ಸಂಘಟನೆಗಳ ನೇತಾರರ ಸಭೆ ಕರೆದು ಚರ್ಚಿಸಬೇಕೆಂದೂ ವೆಳ್ಳಾಪಳ್ಳಿ ಆಗ್ರಹಿಸಿದ್ದಾರೆ. ಆದರೆ ಎಸ್.ಎನ್.ಡಿ.ಪಿ ನಿಲುವು ಮತ್ತು ಬಿಡಿಜೆಎಸ್ ನಿಲುವು ಬೇರೆಯೇ ಆಗಿದೆ ಎಂದು ಬಿಡಿಜೆಎಸ್ ಅಧಕ್ಷ ವೆಳ್ಳಾಪಳ್ಳಿ ಸ್ಪಷ್ಟಪಡಿಸಿದ್ದಾರೆ.

NO COMMENTS

LEAVE A REPLY