ಸಿಪಿಎಂ ಕಾರ್ಯಕರ್ತರಿಗೆ ಆಕ್ರಮಣ: ಮತ್ತೆ ಆರು ಮಂದಿ ಸೆರೆ

0
36

ಮಂಜೇಶ್ವರ: ಸಿಪಿಎಂ ಕಾರ್ಯಕರ್ತರಿಗೆ ಆಕ್ರಮಣಗೈದ ಆರೋಪದಂತೆ ಮತ್ತೆ ಆರು ಮಂದಿ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಅರಿಮಲೆ ನಿವಾಸಿಗಳಾದ ಶೋಭಿತ್ (೨೩), ಕೀರ್ತನ್ (೨೧), ಕಿರಣ್‌ದಾಸ್ (೨೩), ಪಾವೂರು ನಿವಾಸಿಗಳಾದ ಸುನಿತ್ (೩೩), ಧೀರಜ್ (೨೦), ಕೋಳ್ಯೂರು ನಿವಾಸಿ ಸುಧೀಶ್ (೨೨) ಎಂಬಿವರನ್ನು ಬಂಧಿಸಲಾಗಿದೆ. ಇದೇ ಪ್ರಕರಣದಲ್ಲಿ ಪಾವೂರು ತಚ್ಚಿರೆ ನಿವಾಸಿಗಳಾದ ಭರತ್‌ರಾಜ್ (೨೫), ವಿಜೇಶ್ (೨೩) ಎಂಬಿವ ರನ್ನು ಮೊನ್ನೆ ಬಂಧಿಸಲಾಗಿತ್ತು.   ಈ ತಿಂಗಳ ೭ರಂದು ರಾತ್ರಿ ೭ ಗಂಟೆಗೆ ವರ್ಕಾಡಿ ಶ್ರೀ ಚಾಮುಂಡೇಶ್ವರಿ ಭಜನಾ ಮಂದಿರ ಸಮೀಪ ಸಿಪಿಎಂ, ಡಿವೈಎಫ್‌ಐ ಕಾರ್ಯಕರ್ತರಾದ ಎಂಟು  ಮಂದಿ ಮೇಲೆ ಆಕ್ರಮಣ ನಡೆದಿರುವುದಾಗಿ ದೂರಲಾಗಿದೆ. ಆಕ್ರಮಣದಲ್ಲಿ ಗಾಯಗೊಂಡ ಸಿಪಿಎಂ ನೇತಾರ ಡಿ. ಬೂಬ ನೀಡಿದ ದೂರಿನಂತೆ ೧೧ ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

NO COMMENTS

LEAVE A REPLY