ಇನ್ನು ನವರಾತ್ರಿ: ದೇವೀ ಕ್ಷೇತ್ರಗಳಲ್ಲಿ ಭಕ್ತರ ಸಂದಣಿ

0
22

ಕಾಸರಗೋಡು: ದುಷ್ಟ ನಿಗ್ರಹದ ವಿಜಯೋತ್ಸವಕ್ಕೆ ಇಂದಿನಿಂದ ಚಾಲನೆ ದೊರೆಯಲಿದೆ. ಶ್ರೀದೇವಿಯು ವಿವಿಧ ಅವತಾರಗಳಿಂದ ಲೋಕ ಕಂಟಕರಾಗಿದ್ದ ದುಷ್ಟ ಶಕ್ತಿಗಳನ್ನು ನಿಗ್ರಹಿಸಿದ ಸ್ಮರಣೆಯನ್ನು ದೇಶದಾದ್ಯಂತ ಭಕ್ತರು ಇಂದಿನಿಂದ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಬರುವಾಗಲೇ ದುಷ್ಟತನಕ್ಕೆ ಪ್ರೇರಣೆಯಾಗುತ್ತಿದ್ದು, ಇದರಿಂದ ಮುಕ್ತಿ ಹೊಂದಲು ದೇವಿಯ ಸ್ಮರಣೆಯಿಂದ ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಲೋಕದ ಸೃಷ್ಟಿಗೆ ಕಾರಣಳಾದ ದೇವಿಯನ್ನು ಸ್ತುತಿಸುವ  ನವರಾತ್ರಿಗಳು ಹೆಚ್ಚು ಪ್ರಾಮುಖ್ಯತೆ ಪಡೆದಿದೆ.

ಜಿಲ್ಲೆಯ ಎಲ್ಲಾ ದೇವೀ ಕ್ಷೇತ್ರಗಳಲ್ಲಿ ಈಗ ನವರಾತ್ರಿಯ ಸಂಭ್ರಮ. ಭಕ್ತರು ಬೆಳಿಗ್ಗಿನಿಂದಲೇ ಕ್ಷೇತ್ರ ದರ್ಶನ ಮಾಡಿ ಕೃತಾರ್ಥರಾಗುತ್ತಿದ್ದಾರೆ. ಸಂಜೆ ವೇಳೆಗಳಲ್ಲಿ ಭಜನೆ, ವಿಶೇಷ ಪೂಜೆ, ವಿವಿಧ ಹೋಮ-ಹವನಾದಿಗಳು ನಡೆಯುತ್ತಿದೆ. ಹೆಚ್ಚಿನ ಎಲ್ಲಾ ಕ್ಷೇತ್ರಗಳಲ್ಲೂ ಮಧ್ಯಾಹ್ನ, ರಾತ್ರಿ ವೇಳೆಗಳಲ್ಲಿ ಅನ್ನಸಂತರ್ಪಣೆಯೂ ನಡೆಯುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಇದರ ಜೊತೆಯಲ್ಲಿ ಹಮ್ಮಿಕೊಳ್ಳಲಾಗಿದೆ. ನವರಾತ್ರಿ ದಿನಗಳಲ್ಲಿ ನಗರದ ಬೀದಿಗಳಲ್ಲಿ ವಿವಿಧ ರೀತಿಯ ವೇಷಗಳು ಕಂಡುಬರಲಿದೆ. ಹುಲಿಯ ವೇಷಗಳು, ನೃತ್ಯಗಳು ನೋಡುಗರ ಗಮನ ಸೆಳೆಯಲಿದೆ.

NO COMMENTS

LEAVE A REPLY