ಬದಿಯಡ್ಕದಲ್ಲಿ ಯುವಮೋರ್ಛಾ- ಡಿವೈಎಫ್‌ಐ ಘರ್ಷಣೆ: ೪ ಮಂದಿ ಜಖಂ

0
36

ಬದಿಯಡ್ಕ: ಯುವಮೋರ್ಛಾ ಹಾಗೂ ಡಿವೈಎಫ್‌ಐ ಕಾರ್ಯಕರ್ತರ ಮಧ್ಯೆ ನಡೆದ ಹೊಡೆದಾಟದಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಯುವಮೋರ್ಛಾ ಕಾರ್ಯಕರ್ತರಾದ ಭರತ್ (೨೪), ಶಿವಾನಂದ ಯಾನೆ ಮುನ್ನ (೨೫), ವಿಜಯ (೨೭) ಎಂಬಿವರು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ, ಡಿವೈಎಫ್‌ಐಯ ಶರೀಫ್ (೧೯) ಚೆಂಗಳ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಿನ್ನೆ ಅಪರಾಹ್ನ ಪೆರಡಾಲ ನವಜೀವನ ಪ್ರೌಢಶಾಲೆ ಬಳಿ ಘರ್ಷಣೆ ನಡೆದಿದೆ. ಕುಂಬಳೆ ಉಪಜಿಲ್ಲಾ ಶಾಲಾ ಕ್ರೀಡಾ ಕೂಟ ಪ್ರಯುಕ್ತ ಪೆರಡಾಲ ಶಾಲೆಯಲ್ಲಿ  ಧ್ವಜಸ್ಥಾಪನೆ ವಿಷಯದಲ್ಲಿ ಎಬಿವಿಪಿ ಹಾಗೂ ಎಸ್‌ಎಫ್‌ಐ ಮಧ್ಯೆ ಉಂಟಾದ ವಿವಾದದ ಮುಂದುವರಿಕೆಯಾಗಿ ಯುವಮೋರ್ಛಾ ಹಾಗೂ ಡಿವೈಎಫ್‌ಐ ಘರ್ಷಣೆ ನಡೆದಿದೆಯೆಂದು ಹೇಳಲಾಗುತ್ತಿದೆ.

NO COMMENTS

LEAVE A REPLY