ಮಾನ್ಯದಲ್ಲಿ ಹುಲಿ ಘರ್ಜನೆ: ಭೀತಿ ಸೃಷ್ಟಿ

0
44

ಮಾನ್ಯ: ಇಲ್ಲಿನ ಶಕ್ತಿನ ಗರದಲ್ಲಿ ಹುಲಿಯ ಘರ್ಜನೆ ಕೇಳಿಸಿರುವು ದಾಗಿ ಹೇಳ ಲಾಗುತ್ತಿದೆ. ಶಕ್ತಿನಗರ ನಿವಾಸಿಯೂ  ಕಾಸರಗೋಡಿನ ಆಟೋ ಚಾಲಕನಾಗಿರುವ ಸುನಿಲ್ ಕುಮಾರ್‌ರಿಗೆ ಹುಲಿಯ ಘರ್ಜನೆ ಕೇಳಿಸಿದೆ. ಇವರು ನಿನ್ನೆ ರಾತ್ರಿ ೧೧  ಗಂಟೆ ವೇಳೆ ಮನೆ ಅಂಗಳಕ್ಕೆ ಬಂದಾಗ ಹುಲಿ ಘರ್ಜಿಸುತ್ತಿರುವುದು ಕೇಳಿಸಿದೆ. ಕೂಡಲೇ ಅವರು ಮನೆಯೊಳಗೆ ತೆರಳಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಹಾಗೂ ನಾಗರಿಕರು ಸೇರಿ ಹುಡುಕಾಡಿ ದರೂ ಹುಲಿಯನ್ನು ಪತ್ತೆಹಚ್ಚ ಲಾಗಲಿಲ್ಲ. ಆದರೆ ಹುಲಿಯ ದ್ದೆಂದು ಸಂಶಯಿಸುವ ಹೆಜ್ಜೆ ಗುರುತು ಕಂಡುಬಂದಿದೆ. ಹುಲಿಯ ಘರ್ಜನೆ ಕೇಳಿಸಿದ ಹಿನ್ನೆಲೆಯಲ್ಲಿ ಈ ಪ್ರದೇಶ ನಿವಾ ಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.

NO COMMENTS

LEAVE A REPLY