ಬಿಎಂಎಸ್‌ನ ೨೪ ತಾಸುಗಳ ಧರಣಿ ಆರಂಭ

0
29

ಕಾಸರಗೋಡು: ಕೇರಳ ಸರಕಾರ ಮಾನವ ಹಕ್ಕು ಧ್ವಂಸ ನಡೆಸುತ್ತಿದೆ ಯೆಂದೂ, ಕೇಂದ್ರ ಸರಕಾರದ ಆಯು ಷ್ಮಾನ್ ಯೋಜನೆ ಜ್ಯಾರಿಗೊಳಿಸಲು ಕೇರಳ ಸರಕಾರ ತಯಾರಾಗದ ನೀತಿ ಹಾಗೂ ಇತರ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಕೊಂಡು ಬಿಎಂಎಸ್‌ನ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆಸುವ ೨೪ ತಾಸುಗಳ ಧರಣಿ ಮುಷ್ಕರ ಕರಂದಕ್ಕಾಡ್ ರಾಷ್ಟ್ರೀಯ ಹೆದ್ದಾರಿ ಬಳಿ  ಇಂದು ಬೆಳಿಗ್ಗೆ ಆರಂಭಗೊಂಡಿತು.

ಬಿಎಂಎಸ್ ರಾಷ್ಟ್ರೀಯ ಸಮಿತಿ ಸದಸ್ಯ ಪಿ.ಕೆ. ರವೀಂದ್ರನಾಥ್ ಪಾಲ್ಘಾಟ್ ಕಾರ್ಯಕ್ರಮ ಉದ್ಘಾಟಿಸಿದರು. ಬಿಎಂಎಸ್ ಜಿಲ್ಲಾಧ್ಯಕ್ಷ ನ್ಯಾಯವಾದಿ ಪಿ. ಮುರಳೀಧರನ್ ಅಧ್ಯಕ್ಷತೆ ವಹಿಸಿದರು. ಮಂಗಳೂರು ಗ್ರಾಮ ಜಿಲ್ಲಾ ಸಂಘ ಚಾಲಕ್ ದಿನೇಶ್ ಮಡಪ್ಪುರ ಸೇರಿದಂತೆ ಹಲವರು ಮಾತನಾಡಿದರು.  ಜಿಲ್ಲಾ ಕಾರ್ಯದರ್ಶಿ ಕೆ.ಎ. ಶ್ರೀನಿವಾಸನ್, ಉಪಾಧ್ಯಕ್ಷರಾದ ಕೆ. ನಾರಾಯಣನ್, ಎಂ. ಬಾಬು, ಟಿ. ಕೃಷ್ಣನ್, ಪಿ. ದಿನೇಶನ್, ಎ. ಕೇಶವ, ಕೆ. ಉಪೇಂದ್ರನ್, ಅನಿಲ್ ಬಿ. ನಾಯರ್ ಮೊದಲಾದವರು ನೇತೃತ್ವದ ನೀಡಿದರು. ಧರಣಿ ನಾಳೆ ಬೆಳಿಗ್ಗೆ ೧೦ ಗಂಟೆಗೆ ಸಮಾಪ್ತಿ ಹೊಂದಲಿದೆ.  ಬಿಎಂಎಸ್ ರಾಜ್ಯ ಕಾರ್ಯದರ್ಶಿ ಪಿ. ಶಶಿಧರನ್ ಕಲ್ಲಿಕೋಟೆ ಉದ್ಘಾಟಿಸಿದರು.

NO COMMENTS

LEAVE A REPLY