ಕೆಂಪುಕಲ್ಲು ಕಡಿಯುವ ಯಂತ್ರದ ಚೈನ್ ದೇಹಕ್ಕೆ ಬಡಿದು ಕಾರ್ಮಿಕನಿಗೆ ದಾರುಣ ಮೃತ್ಯು

0
51

ಬೆಳ್ಳೂರು: ಕೆಂಪುಕಲ್ಲು ಕಡಿಯುವ ಯಂತ್ರದ ಚೈನ್ ದೇಹಕ್ಕೆ ಬಡಿದು ಕಾರ್ಮಿಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.

ನೆಟ್ಟಣಿಗೆ ಬಳಿಯ ಕುಳದಪಾರೆಯಲ್ಲಿ ನಿನ್ನೆ ಈ   ಘಟನೆ ಸಂಭವಿಸಿದೆ.  ಕುಳದಪಾರೆ ಕೊಲ್ಯ ನಿವಾಸಿ ಗೋಪಾಲ ಹೆಗ್ಡೆ (೪೮) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಕುಳದಪಾರೆಯಲ್ಲಿ ಕಾರ್ಯಾ ಚರಿಸುವ ಕೆಂಪು ಕಲ್ಲು ಕೋರೆಯಲ್ಲಿ ಕಲ್ಲು ಕಡಿಯುವ ಯಂತ್ರದ ಆಪರೇಟರ್ ಆಗಿ ಗೋಪಾಲ ಹೆಗ್ಡೆ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ಬೆಳಿಗ್ಗೆ ಕೆಲಸ ನಿರತರಾಗಿದ್ದಾಗ ಯಂತ್ರದ ಕಬ್ಬಿಣದ ಚೈನ್ ತುಂಡರಿಸಲ್ಪಟ್ಟು ಗೋಪಾಲ ಹೆಗ್ಡೆಯ ದೇಹಕ್ಕೆ ಬಡಿದಿದೆ. ಇದರಿಂದ ಹೊಟ್ಟೆಗೆ ಗಂಭೀರ ಗಾಯವುಂಟಾಗಿತ್ತು.

ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಪುತ್ತೂರಿನ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಮನೆಗೆ ತಂದು ಅಂತ್ಯಸಂಸ್ಕಾರ ನಡೆಸಲಾಯಿತು. ಮೃತರು ಪತ್ನಿ ರಮಣಿ, ಪುತ್ರ ಲಕ್ಷ್ಮೀಕಾಂತ, ಸಹೋದರ ನಾರಾಯಣ, ಸಹೋದರಿ ಗಿರಿಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ದುರ್ಘಟನೆ ಬಗ್ಗೆ ಆದೂರು ಠಾಣೆ ಪೊಲೀಸರು ಅಪಘಾತ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಂಚಾಯತ್ ಅಧ್ಯಕ್ಷೆ ಲತಾ, ಬಿಜೆಪಿ ನೇತಾರರಾದ ಜಯಾನಂದ ಕುಳ, ಚಂದ್ರಹಾಸ ರೈ ಮುಂಡಾಸು, ಶ್ರೀಧರ ಬೆಳ್ಳೂರು, ಗೋಪಾಲಕೃಷ್ಣ ಹೆಗ್ಡೆ ಮೊದಲಾದವರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

 

NO COMMENTS

LEAVE A REPLY