ಲೈಂಗಿಕ ಕಿರುಕುಳ ಆರೋಪ: ಶಾಸಕ ಪಿ.ಕೆ. ಶಶಿ ವಿರುದ್ದ ಕ್ರಮ ಸಾಧ್ಯತೆ

0
39

ತಿರುವನಂತಪುರ: ಲೈಂಗಿಕ ಕಿರುಕುಳ ವಿವಾದಕ್ಕೆ ಸಂಬಂಧಿಸಿ ಶೋರ್ನೂರು ಶಾಸಕ, ಸಿಪಿಎಂ ಪಾಲಕ್ಕಾಡ್ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯನಾದ ಪಿ.ಕೆ. ಶಶಿ ವಿರುದ್ಧ ವಿರುದ್ಧ ಪಕ್ಷ ಕೈಗೊಳ್ಳುವ ಶಿಸ್ತು ಕ್ರಮ ಬಗ್ಗೆ ಇಂದಿನ ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸಭೆಯಲ್ಲಿ ತೀ ರ್ಮಾನವುಂಟಾಗಲಿದೆ. ಸಚಿವ ಎ.ಕೆ. ಬಾಲನ್, ಸಂಸದೆ ಪಿ.ಕೆ. ಶ್ರೀಮತಿ ಎಂಬಿವರನ್ನೊಳಗೊಂಡ ಪಕ್ಷದ ತನಿಖಾ ನಿಯೋಗದ ವರದಿಯನ್ನು ಇಂದಿನ ಸಿಪಿಎಂ ಸಭೆ ಪರಿಗಣಿ ಸಲಿದೆ. ನಾಳೆ ರಾಜ್ಯ ಸಮಿತಿ ಸಭೆ ನಡೆಯಲಿದೆ. ಶಶಿ ವಿರುದ್ಧದ ಆರೋಪದೊಂದಿಗೆ, ತನ್ನ ವಿರುದ್ಧ ಗೂಢಾಲೋಚನೆ ನಡೆಸಲಾಗಿದೆ ಯೆಂಬ ಶಶಿಯ  ಹೇಳಿಕೆಯನ್ನು ಸಭೆ ಪರಿಗಣಿಸಲಿದೆ.

ವರದಿಯ ಆಧಾರದಲ್ಲಿ ಸಿಪಿಎಂ ನಾಯಕತ್ವ ಅಂತಿಮ ನಿರ್ಧಾರ ಕೈಗೊಳ್ಳುವುದು.  ಪಾಲಕ್ಕಾಡ್ ಜಿಲ್ಲಾ ಘಟಕದಿಂದ ಶಶಿಯನ್ನು ಬೆಂಬಲಿಸಿ ಹಾಗೂವಿರೋಧಿಸಿ ಪತ್ರಗಳು ಸಿಪಿಎಂ ರಾಜ್ಯ ಸಮಿತಿಗೆ ಲಭಿಸಿದೆ ಯೆನ್ನಲಾಗುತ್ತಿದೆ.

  ಸಿಪಿಎಂ ರಾಜ್ಯ ನಾಯಕತ್ವ ಸಭೆಕೈಗೊಳ್ಳುವ ನಿರ್ಧಾರ   ಪಕ್ಷದಲ್ಲಿ ಚರ್ಚೆಗೆ ಕಾರಣವಾಗಲಿದೆ.

NO COMMENTS

LEAVE A REPLY