ಬೈಕ್ ಢಿಕ್ಕಿ: ಪಾದಚಾರಿ ಮೃತ್ಯು

0
41

ಕಾಸರಗೋಡು: ಬೈಕ್ ಢಿಕ್ಕಿಹೊಡೆದು ಪಾದಚಾರಿಯಾದ   ತಮಿಳುನಾಡು ನಿವಾಸಿ ಮುತ್ತಯ್ಯ (೫೦) ಮೃತಪಟ್ಟಿದ್ದಾರೆ. ನಗರದ ನೆಲ್ಲಿಕುಂಜೆಯಲ್ಲಿ ಈ ಅಪಘಾತ ಸಂಭವಿಸಿದೆ. ಮುತ್ತಯ್ಯ ರಸ್ತೆ ಬದಿ ನಡೆದುಹೋಗುತ್ತಿದ್ದ ವೇಳೆ ಅವರಿಗೆ ಬೈಕ್ ಢಿಕ್ಕಿಹೊಡೆದಿದೆ. ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕಾಸರಗೋಡು ಪೊಲೀಸರು ತನಿಖೆ ನಡೆಸಿದರು.

NO COMMENTS

LEAVE A REPLY