ಶಾಲಾ ವಿದ್ಯಾರ್ಥಿನಿಯನ್ನು ಆಟೋರಿಕ್ಷಾದಲ್ಲಿ ಕರೆದೊಯ್ದು ಲೈಂಗಿಕ ಕಿರುಕುಳ: ಚಾಲಕ ಕಸ್ಟಡಿಗೆ

0
52

ಕುಂಬಳೆ: ಶಾಲಾ  ವಿದ್ಯಾರ್ಥಿನಿ ಯನ್ನು ಆಟೋರಿಕ್ಷಾದಲ್ಲಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಬಂಬ್ರಾಣ ಬಯಲು ನಿವಾಸಿಯಾದ ಆಟೋ ಚಾಲಕ ಕಿರಣ್‌ರಾಜ್ ಶೆಟ್ಟಿ(೨೦) ಎಂಬಾತ ಕಸ್ಟಡಿಯಲ್ಲಿರುವ ವ್ಯಕ್ತಿಯಾಗಿ ದ್ದಾನೆ. ಇತ್ತೀಚೆಗೆ ಬೆಳಿಗ್ಗೆ ಶಾಲೆಗೆ ತೆರಳುತ್ತಿದ್ದ ಎಂಟನೇ ತರಗತಿ ವಿದ್ಯಾರ್ಥಿನಿಯ ನ್ನು ತನ್ನ ಆಟೋರಿಕ್ಷಾದಲ್ಲಿ ಕರೆದೊಯ್ದಿದ್ದನು. ಬಳಿಕ ಜನವಾಸ ವಿಲ್ಲದ ಮನೆಗೆ ಕೊಂಡೊಯ್ದು ಕಿರುಕುಳ ನೀಡಿದ್ದು, ನಂತರ ಶಾಲೆಗೆ ತಲುಪಿಸಿದ್ದಾನೆನ್ನಲಾಗಿದೆ. ಇದೇ ವೇಳೆ ಅಸ್ವಸ್ಥ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿ ಯನ್ನು ಅಧ್ಯಾಪಿಕೆಯರು ಪ್ರಶ್ನಿಸಿದಾಗ ವಿಷಯ ತಿಳಿದು ಬಂದಿದೆ. ವಿಷಯ ತಿಳಿದು ತಲುಪಿದ ಚೈಲ್ಡ್‌ಲೈನ್ ಅಧಿಕಾರಿಗಳು ಬಾಲಕಿಯಿಂದ ಹೇಳಿಕೆ ದಾಖಲಿಸಿದ ಬಳಿಕ  ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿತ್ತು. ಇದರಂತೆ ಪೊಲೀ ಸರು ಕೇಸು ದಾಖಲಿಸಿ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪ್ರಕರಣ ವನ್ನು ಎಸ್.ಎಂ.ಎಸ್‌ಗೆ ಹಸ್ತಾಂತರಿಸುವು ದಾಗಿ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY