ಸಂಚರಿಸುತ್ತಿದ್ದ ಬಸ್‌ಗೆ ಕಲ್ಲೆಸೆತ ಯುವಕನ ಬೆನ್ನಟ್ಟಿ ಸೆರೆ

0
33

ಕುಂಬಳೆ: ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್‌ಗೆ ಯುವಕನೋರ್ವ ಕಲ್ಲೆಸೆದು ಹಾನಿಗೈದಿದ್ದು, ಕೂಡಲೇ ಆತನನ್ನು ಪ್ರಯಾಣಿಕರು ಹಾಗೂ ನಾಗರಿಕರು ಸೇರಿ ಸೆರೆ ಹಿಡಿದಿದ್ದಾರೆ. ನಿನ್ನೆ ಸಂಜೆ ೩.೩೦ರ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಆರಿಕ್ಕಾಡಿ ಶ್ರೀ ಹನುಮಾನ್ ಕ್ಷೇತ್ರ ಬಳಿ ಘಟನೆ ನಡೆದಿದೆ. ತೃಶೂರು ವರವೂರ್ ನಿವಾಸಿ ಯಾದ ಸಿಹಾಸ್ ಇ.(೨೬) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. ನಿನ್ನೆ ಅಪರಾಹ್ನ ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೇರಳ ರಾಜ್ಯ ಸಾರಿಗೆ ನಿಗಮದ ಬಸ್‌ಗೆ ಈತ ಕಲ್ಲೆಸೆದು ಪರಾರಿ ಯಾಗಲೆತ್ನಿಸಿದ್ದನು.  ಕೂಡಲೇ ಆತನನ್ನು ಸೆರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಘಟನೆ ಬಗ್ಗೆ ಬಸ್ ನಿರ್ವಾಹಕ ಮಧುಸೂದನ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ತೃಶೂರು ನಿವಾಸಿಯಾದ ಯುವಕ ಕುಂಬಳೆಗೆ ಯಾಕಾಗಿ ತಲುಪಿದ್ದಾನೆಂದು ತಿಳಿದು ಬಂದಿಲ್ಲ. ತನಿಖೆ ನಡೆಯುತ್ತಿದೆ.

NO COMMENTS

LEAVE A REPLY