ಶಬರಿಮಲೆ ಪೂರ್ಣ ಪೊಲೀಸ್ ವ್ಯೂಹದಲ್ಲಿ

0
24

ಶಬರಿಮಲೆ: ಶಬರಿಮಲೆ ದೇಗುಲದ ಗರ್ಭಗುಡಿಯ ಬಾಗಿಲನ್ನು ಚಿತ್ತಿರಾ ಆಟ್ಟತಿರುನಾಳ್‌ನ ಅಂಗವಾಗಿ ಭಕ್ತರ ದರ್ಶನಕ್ಕಾಗಿ ನವೆಂಬರ್ ೫ರಂದು ತೆರೆಯಲಾಗುವುದು. ಯುವತಿಯರ ಪ್ರವೇಶ ವಿಷಯದಲ್ಲಿ ಸುಪ್ರೀಂಕೋ ರ್ಟ್‌ನ ತೀರ್ಪನ್ನು ಜ್ಯಾರಿಗೊಳಿಸಲು ಒಂದೆಡೆ ರಾಜ್ಯ ಸರಕಾರ ಕೈಗೊಂಡಿರುವ ಕಠಿಣ ನಿಲುವು ಮತ್ತು ಇನ್ನೊಂದೆಡೆ ಅದರ ವಿರುದ್ಧ ಹಲವು ಹಿಂದೂ ಸಂಘಟನೆಗಳು ತಮ್ಮ ಪ್ರತಿಭಟನೆ ಮುಂದುವರಿಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಘರ್ಷಣೆ ಸಾಧ್ಯತೆ ಮನಗಂಡು ಶಬರಿಮಲೆ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಇಂದು ರಾತ್ರಿ ೧೨ ಗಂಟೆಯಿಂದ ಮಂಗಳವಾರ ರಾತ್ರಿ ೧೨ ಗಂಟೆ ತನಕ ನಿಷೇಧಾಜ್ಞೆ ಜ್ಯಾರಿಗೊಳಿಸಲಾಗಿದೆ. ಇಂದಿನಿಂದ ಪೂರ್ಣವಾಗಿ ಶಬರಿಮಲೆಯನ್ನು ಪೊಲೀಸ್ ಇಲಾಖೆ ತಮ್ಮ ಹಿಡಿತಕ್ಕೊಳಪಡಿಸಿದೆ. ಅದಕ್ಕಾಗಿ ಪೊಲೀಸರು ಬಿಗಿ ಚಕ್ರವ್ಯೂಹ ಏರ್ಪಡಿಸಿದ್ದಾರೆ. ಇದರ ಜತೆಗೆ ಸುದ್ದಿಮಾಧ್ಯಮದವರಿಗೆ ನಿಯಂತ್ರಣ ಹೇರಲಾಗಿದೆ.

ಗುಂಪು ಸೇರುವಿಕೆ, ಚಳವಳಿ ನಡೆಸುವಿಕೆ, ಆಯುಧ ಕೈವಶವಿರಿಸುವಿಕೆ ಇತ್ಯಾದಿಗಳಿಗೆ ನಿಷೇಧ ಹೇರಲಾಗಿದೆ. ನಿಲಯ್ಕಲ್‌ನಲ್ಲಿ ಪೊಲೀಸ್ ತಪಾಸಣೆ ಬಳಿಕವಷ್ಟೇ ಭಕ್ತರನ್ನು ದೇಗುಲಕ್ಕೆ ಬಿಡಲಾಗುವುದು. ಇರುಮುಡಿ ಹೊಂದದ ಭಕ್ತರು ಅವರ ಗುರುತು ಪತ್ರಗಳನ್ನು ಕೈವಶವಿರಿಸಬೇಕು. ಅದನ್ನು ಪರಿಶೀಲಿಸಿದ ಬಳಿಕವಷ್ಟೇ ಮುಂದಕ್ಕೆ ಬಿಡಲಾಗುವುದು. ಹಲವೆಡೆಗಳಲ್ಲಿ ಪೊಲೀಸ್ ತಪಾಸಣೆ ಏರ್ಪಡಿಸಲಾಗುವುದು. ಭದ್ರತಾ ನಿರ್ದೇಶಗಳನ್ನು ಪಾಲಿಸದವರನ್ನು ಸೆರೆ ಹಿಡಿಯುವ ತೀರ್ಮಾನವನ್ನು ಪೊಲೀಸರು ಕೈಗೊಂಡಿದ್ದಾರೆ.  ೫ರಂದು ಸಂಜೆ ೫ ಗಂಟೆಗೆ ಶಬರಿಮಲೆಯ ಗರ್ಭಗುಡಿ ಬಾಗಿಲು ತೆರೆದು ಮರುದಿನ ರಾತ್ರಿ ೧೦ ಗಂಟೆಗೆ ಮುಚ್ಚಲಾಗುವುದು. ಅದರಿಂದಾಗಿ ಗರ್ಭಗುಡಿ ಬಾಗಿಲು ತೆರೆದ ಬಳಿಕದ ೨೯ ತಾಸುಗಳು ಭದ್ರತಾ ದೃಷ್ಟಿಯಿಂದ ಅತೀ ನಿರ್ಣಾಯಕವಾಗಲಿದೆ.

ಬಿಗು ಭದ್ರತೆಗಾಗಿ ಶಬರಿಮಲೆ ಯಲ್ಲಿ ಮಾತ್ರವಾಗಿ ೫೦೦೦ ಕ್ಕಿಂತಲೂ ಹೆಚ್ಚು ಪೊಲೀಸರನ್ನು ಕರ್ತವ್ಯಕ್ಕಾಗಿ ಇಂದಿನಿಂದ ನೇಮಿಸ ಲಾಗಿದೆ. ಭದ್ರತಾ ಕ್ರಮದಂಗವಾಗಿ ನಿಲಯ್ಕಲ್, ಪಂಪಾ, ಕಾನನ ಹಾದಿ ಮತ್ತು ಸನ್ನಿಧಾನದಲ್ಲಿ ಅನಗತ್ಯವಾಗಿ ಭಕ್ತರನ್ನು ಉಳಕೊಳ್ಳಲು ಬಿಡಲಾಗು ವುದಿಲ್ಲವೆಂದೂ ಪೊಲೀಸರು ತಿಳಿಸಿ ದ್ದಾರೆ. ನಿಲಯ್ಕಲ್, ಪಂಪಾ ಮತ್ತು ಸನ್ನಿಧಾನ ಪರಿಸರದಲ್ಲಿ ಪೊಲೀಸರ ತಪಾಸಣೆ ಬಳಿಕವಷ್ಟೇ ಭಕ್ತರನ್ನು ಪ್ರವೇಶಿಸಲು ಬಿಡುವ ಕ್ರಮವನ್ನು ಕೈಗೊಳ್ಳಲಾಗಿದೆ.

ಸಂರಕ್ಷಣೆ ಕೋರಿ ೧೨ ಯುವತಿಯರಿಂದ ಅರ್ಜಿ

 ೫ರಂದು ಸನ್ನಿಧಾನ ಪ್ರವೇಶಿಸಿ ದೇವರ ದರ್ಶನ ನಡೆಸಲು ತಮಗೆ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿ ೧೨ ಮಂದಿ ಯುವತಿಯರು ಪತ್ತನಂತಿಟ್ಟ ಜಿಲ್ಲಾ ಆಡಳಿತ ಮತ್ತು ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಹೀಗೆ ಮನವಿ ಸಲ್ಲಿಸಿದವರಲ್ಲಿ ಕಳೆದ ತಿಂಗಳು ಶಬರಿಮಲೆ ಪ್ರವೇಶಿಸಲೆತ್ನಿಸಿದ ಚಾತನ್ನೂರು ನಿವಾಸಿ ಮಂಜು ಕೂಡಾ ಒಳಗೊಂಡಿದ್ದಾರೆ. ಇದೇ ವೇಳೆ ಸಂರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ ಯುವತಿಯರ ಕುರಿತಾದ ಪೂರ್ಣ ಮಾಹಿತಿ ಸಂಗ್ರಹಿಸಿದ ಬಳಿಕ ಮಾತ್ರವೇ ಅವರಿಗೆ ಸಂರಕ್ಷಣೆ ಒದಗಿಸುವ ಬಗ್ಗೆ ಪರಿಶೀಲಿಸಲಾ ಗುವುದೆಂದು ಜಿಲ್ಲಾಡಳಿತ ತಿಳಿಸಿದೆ.

ಮನವಿ ಸಲ್ಲಿಸಿದವರಲ್ಲಿ ಹೆಚ್ಚಿನ ಯುವತಿಯರು ವಾಮಪಂಥೀಯ ಒಕ್ಕೂಟಕ್ಕೆ ಸೇರಿದವರಾಗಿದ್ದಾರೆ. ಇದರ ಹೊರತಾಗಿ ಮಹಾರಾಜ ಕಾಲೇಜಿನ ಕೆಲವು ವಿದ್ಯಾರ್ಥಿನಿ ಯರ ತಂಡವೂ ಶಬರಿಮಲೆ ಪ್ರವೇಶಿಸಲು ಪೊಲೀಸ್ ಸಂರಕ್ಷಣೆಗಾಗಿ ಪೊಲೀಸರಲ್ಲಿ ಬೇಡಿಕೆ ಮುಂದಿರಿಸಿದ್ದಾರೆ. ಇದು ಪೊಲೀಸರಿಗೆ ತೀವ್ರ ತಲೆನೋವು ಸೃಷ್ಟಿಸತೊಡಗಿದೆ. ಇದು ೫ರಂದು ಶಬರಿಮಲೆಯನ್ನು ಮತ್ತೆ ಪ್ರಕ್ಷುಬ್ದಗೊಳಿಸಬಹುದೆಂಬ ಆತಂಕ ಪೊಲೀಸರನ್ನು ಕಾಡಿದೆ.

NO COMMENTS

LEAVE A REPLY