ವಾರಂಟ್ ಆರೋಪಿಯನ್ನು ವಶಕ್ಕೆ ತೆಗೆಯಲು ಹೋದ ಪೊಲೀಸ್‌ಗೆ ತಡೆ: ಪ್ರಕರಣ ದಾಖಲು

0
27

ಕಾಸರಗೋಡು: ವಾರಂಟ್ ಪ್ರಕಾರ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲು ಹೋದ ಪೊಲೀಸರ ನ್ನು ತಡೆದು ನಿಲ್ಲಿಸಿ ಆರೋಪಿ  ತಪ್ಪಿಸಿಕೊಳ್ಳಲು ಸಹಾಯ ಮಾಡಿ, ಆ ಮೂಲಕ ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿ ತಂದ ದೂರಿನಂತೆ ಆರೋಪಿಯ ತಂದೆ ವಿರುದ್ಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲುಗೊಂಡ ನರಹತ್ಯಾ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಚಟ್ಟಂಚಾಲ್ ಬೆಂಡಿಚ್ಚಾಲ್ ನಿವಾಸಿ ಫಾರೂಕ್ ಎಂಬಾತನನ್ನು ವಾರಂಟ್ ನನ್ವಯ ವಶಕ್ಕೆ ತೆಗೆಯಲೆಂದು ವಿದ್ಯಾನಗರ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಆಫೀಸರ್ ಶಾಜನ್ ಕೆ.ಟಿ. ನಿನ್ನೆ ಫಾರೂಕ್‌ನ ಮನೆಗೆ ಹೋಗಿದ್ದರು. ಆಗ ಅವರನ್ನು ಆರೋಪಿಯ ತಂದೆ ಅಬ್ದುಲ್ಲ ತಡೆಯೊಡ್ಡಿದರೆಂದೂ ತನ್ನ ಕರ್ತವ್ಯ ನಿರ್ವಹಣೆಗೆ ಅಡ್ಡಿ ತಂದು ಆರೋಪಿ ತಪ್ಪಿಸಿಕೊಳ್ಳಲು ಸಹಾಯ ಒದಗಿಸಿದರೆಂದೂ ದೂರಿ ಶಾಜನ್ ಬಳಿಕ ವಿದ್ಯಾನಗರ ಪೊಲೀಸರಿಗೆ  ದೂರು ನೀಡಿದ್ದರು. ಅದರಂತೆ ಪೊಲೀಸರು ಅಬ್ದುಲ್ಲ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

NO COMMENTS

LEAVE A REPLY