ಕಟ್ಟಡ ನಿರ್ಮಾಣ ಗುತ್ತಿಗೆದಾರನಿಗೆ ಹಲ್ಲೆ: ಓರ್ವ ಆರೋಪಿ ಬಂಧನ

0
28

ಬದಿಯಡ್ಕ: ಕಟ್ಟಡ ನಿರ್ಮಾಣದ ಗುತ್ತಿಗೆದಾರನಿಗೆ ಹಲ್ಲೆಗೈದು ಗಾಯಗೊಳಿಸಿದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಇನ್ನೋರ್ವ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ.

ನೆಲ್ಲಿಕಟ್ಟೆ ಬಿಲಾಲ್‌ನಗರ ನಿವಾಸಿ ಹಂಸ (೩೬) ಎಂಬಾತ ಬಂಧಿತ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ. ಇನ್ನೋರ್ವ ಆರೋಪಿಯಾದ ನೆಲ್ಲಿಕಟ್ಟೆಯ ಹಸೈನಾರ್ ತಲೆಮರೆಸಿಕೊಂಡಿದ್ದಾನೆ. ಉತ್ತರಪ್ರದೇಶ ನಿವಾಸಿಯೂ ನೆಲ್ಲಿಕಟ್ಟೆಯಲ್ಲಿ ವಾಸಿಸಿ ಕಟ್ಟಡ ನಿರ್ಮಾಣ ಗುತ್ತಿಗೆ ನಡೆಸುತ್ತಿದ್ದ ಅಕ್ರಂ ಹುಸೈನ್ (೩೨)ಗೆ ಅಕ್ಟೋಬರ್ ೨೬ರಂದು ನೆಲ್ಲಿಕಟ್ಟೆಯಲ್ಲಿ ಹಂಸ ಹಾಗೂ ಹಸೈನಾರ್ ಸೇರಿ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಹಂಸನ ವ್ಯಾಪಾರ ಸಂಸ್ಥೆಯ ನಿರ್ಮಾಣದ ಕೆಲಸವನ್ನು ಅಕ್ರಂ ಹುಸೈನ್ ವಹಿಸಿಕೊಂಡಿದ್ದಾನೆ ನ್ನಲಾಗಿದೆ.  ಆದರೆ ನಿಗದಿತ ಸಮಯದಲ್ಲಿ ಕೆಲಸ ಪೂರ್ತಿ ಗೊಳಿಸಿಲ್ಲವೆಂದು ಆರೋಪಿಸಿ ಹಂಸ ಹಾಗೂ ಹಸೈನಾರ್ ಹಲ್ಲೆಗೈದಿ ದ್ದಾರೆಂದು ಆರೋಪಿಸಲಾಗಿದೆ. ಇದರಂತೆ ಈ ಇಬ್ಬರ ವಿರುದ್ಧ ಬದಿಯಡ್ಕ ಪೊಲೀಸರು ಜಾಮೀನು ರಹಿತ ಕೇಸು ದಾಖಲಿಸಿಕೊಂ ಡಿದ್ದಾರೆ.

NO COMMENTS

LEAVE A REPLY