ರಿಕ್ಷಾದಲ್ಲಿ ಬಂದ ತಂಡದಿಂದ ಅಂಚೆ ಸಿಬ್ಬಂದಿಯ ೪೩೦೦೦ ರೂ. ಒಳಗೊಂಡ ಬ್ಯಾಗ್ ದರೋಡೆ

0
37

ಕಾಸರಗೋಡು: ರಾತ್ರಿ ರಸ್ತೆ ಬಳಿ ನಿಂತು ಮಾತನಾಡುತ್ತಿದ್ದ ಅಂಚೆ ಸಿಬ್ಬಂದಿಯ ೪೩೦೦೦ ನಗದು ಮತ್ತಿತರ ಸಾಮಗ್ರಿಗಳು ಒಳಗೊಂಡಿ ದ್ದ ಬ್ಯಾಗನ್ನು ಆಟೋರಿಕ್ಷಾದಲ್ಲಿ ಬಂದ ತಂಡ ದರೋಡೆಗೈದ ಘಟನೆ ನಡೆದಿದೆ.

ಕಾಸರಗೋಡು ಪೋಸ್ಟಲ್ ವಿಭಾಗದ ಅಸಿಸ್ಟೆಂಟ್ ಮುಳಿಯಾರು ಕೋಟೂರು ನಿವಾಸಿ ಸುಜಿತ್ ಪಿ.ವಿ. (೨೯)ರ ಹಣ ಒಳಗೊಂಡ ಬ್ಯಾಗನ್ನು ಈ ರೀತಿ ದರೋಡೆಗೈಯ್ಯಲಾಗಿದೆ.

ಸುಜಿತ್ ಮೊನ್ನೆ ಬೈಕ್ ನಿಲ್ಲಿಸಿ ಕೆ.ಕೆ. ಪುರ ರಸ್ತೆ ಬಳಿ  ಮಾತನಾಡುತ್ತಿದ್ದ ವೇಳೆ ಆಟೋರಿಕ್ಷಾದಲ್ಲಿ ಅಲ್ಲಿಗೆ ಬಂದ ಇಬ್ಬರು ಸುಜಿತ್‌ರ ನಗದು ಒಳಗೊಂಡ ಬ್ಯಾಗನ್ನು ಕಸಿದು ಪರಾರಿಯಾಗಿದ್ದಾರೆ. ಈ ಬಗ್ಗೆ ಸುಜಿತ್ ನೀಡಿದ ದೂರಿನಂತೆ ಪೊಲೀಸರು ಕಂಡರೆ ಗುರುತು ಹಚ್ಚಲು ಸಾಧ್ಯವಾಗುವ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.  ಆರೋಪಿಗಳ ಪತ್ತೆಗಾಗಿ ವ್ಯಾಪಕ ಶೋಧ ಆರಂಭಿಸಲಾಗಿದೆ.

NO COMMENTS

LEAVE A REPLY