ಶಬರಿಮಲೆಗೆ ಪೊಲೀಸ್ ರಕ್ಷಾಕವಚ: ಆಚಾರ ಉಲ್ಲಂಘನೆ ನಡೆದಲ್ಲಿ ಗರ್ಭಗುಡಿ ಬಾಗಿಲು ಮುಚ್ಚುವೆವು-ಪ್ರಧಾನ ಅರ್ಚಕರಿಂದ ಮುನ್ನೆಚ್ಚರಿಕೆ

0
29

 

ಶಬರಿಮಲೆ: ಚಿತ್ತಿರ ಆಟ್ಟತಿ ರುನಾಳ್ ವಿಶೇಷ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲು ಇಂದು ಸಂಜೆ ೫ ಗಂಟೆಗೆ ಮತ್ತೆ ತೆರೆಯಲಿರುವಂತೆಯೇ ಆಚಾರ ಉಲ್ಲಂಘನೆ ಉಂಟಾದಲ್ಲಿ ಗರ್ಭಗುಡಿ ಬಾಗಿಲು ಮುಚ್ಚಿ ಹೊರ ನಡೆಯುವುದಾಗಿ ಶಬರಿಮಲೆ ಪ್ರಧಾನ ಅರ್ಚಕರು ಮುನ್ನೆಚ್ಚರಿಕೆ ನೀಡಿದ್ದಾರೆ. ಐ.ಜಿ. ಎಂ.ಆರ್. ಅಜಿತ್ ಕುಮಾರ್‌ರಲ್ಲಿ ಪ್ರಧಾನ ಅರ್ಚಕರು ಇಂದು ಬೆಳಿಗ್ಗೆ  ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಶಬರಿಮಲೆ ದರ್ಶನಕ್ಕೆ ಸಂರಕ್ಷಣೆ ಕೋರಿ ಈ ತನಕ ೧೦ರಿಂದ ೫೦ರ ಮಧ್ಯೆ ಪ್ರಾಯದ ಯಾವುದೇ ಯುವತಿ ಯರು ತಮ್ಮನ್ನು  ಸಂಪರ್ಕಿ ಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.  ಇದು ಬಿಗು ಸ್ಥಿತಿಯನ್ನು ನಿರಾಳ ಗೊಳಿಸುವಂತೆ ಮಾಡಿದೆ.

ಇನ್ನೊಂದೆಡೆ ಶಬರಿಮಲೆ ದೇಗುಲದ ಇತಿಹಾಸದಲ್ಲೇ ಇದೇ ಪ್ರಥಮವಾಗಿ ೧೫ ಮಂದಿ ಮಹಿಳಾ ಪೊಲೀಸರನ್ನು ಸನ್ನಿಧಾನದಲ್ಲಿ ಕರ್ತವ್ಯಕ್ಕೆ ನೇಮಿಸಲಾಗಿದೆ. ಈ ಎಲ್ಲಾ ಮಹಿಳಾ ಪೊಲೀಸರು ೫೦ ವರ್ಷಕ್ಕಿಂತ ಮೇಲ್ಪಟ್ಟ ಪ್ರಾಯದವ ರಾಗಿದ್ದಾರೆ. ಮಹಿಳಾ ಭಕ್ತೆಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿ ಸಿದ್ದಲ್ಲಿ ನಿಯಂತ್ರಿಸುವ ಉದ್ದೇಶದಿಂದ ಸನ್ನಿಧಾನದಲ್ಲಿ ಮಹಿಳಾ ಪೊಲೀ ಸರನ್ನು  ನೇಮಿಸಲಾಗಿದೆ. ಯಾವುದೇ ರೀತಿಯ ಸಂಘರ್ಷ ಉಂಟಾ ಗುವುದನ್ನು ತಡೆಗಟ್ಟಲು ಶಬರಿಮಲೆ ಮತ್ತು ಪರಿಸರ ಪ್ರದೇಶಗಳಲ್ಲಿ ಪೊಲೀಸ್ ರಕ್ಷಾ ಕವಚ ಏರ್ಪಡಿಸ ಲಾಗಿದೆ. ಸನ್ನಿಧಾನದ ನಿಯಂತ್ರಣ ವನ್ನು ಪೂರ್ಣವಾಗಿ ಕಮಾಂಡೋ ಗಳ ಕೈಗೆ ಒಪ್ಪಿಸಲಾಗಿದೆ. ಸನ್ನಿಧಾನದಲ್ಲಿ ಮಾತ್ರವಾಗಿ ೧೫೦೦ ಪೊಲೀಸರನ್ನು ಕರ್ತವ್ಯಕ್ಕಾಗಿ ನೇಮಿಸಲಾಗಿದೆ.

ವಿಶೇಷ ಪೂಜೆಗಾಗಿ ಶಬರಿ ಮಲೆಗೆ ಆಗಮಿಸುವ ಭಕ್ತರನ್ನು ಎರುಮೇಲಿ, ಪತ್ತನಂತಿಟ್ಟ, ವಡಕ್ಕ ಶ್ಶೇರಿ ಮತ್ತು ನಿಲಯ್ಕಲ್ ಎಂಬೀ ನಾಲ್ಕೆಡೆಗಳಲ್ಲಿ ಪೊಲೀಸ್ ತಪಾಸಣೆಗೊಳಪಡಿಸಿದ ಬಳಿಕವಷ್ಟೇ ಶಬರಿ ಮಲೆ ಪ್ರವೇಶಿಸಲು ಬಿಡಲಾಗುತ್ತದೆ. ಅಪಾರ ಸಂಖ್ಯೆಯ ಭಕ್ತರು ನಿನ್ನೆ ರಾತ್ರಿಯೇ ನಿಲಯ್ಕಲ್‌ಗೆ ಬಂದು ಸೇರಿದ್ದರು. ಅವರನ್ನು ಅಲ್ಲಿಂದ ವಾಹನಗಳಲ್ಲಿ ಮುಂದಕ್ಕೆ ಸಾಗಲು ಪೊಲೀಸರು ತಡೆದಾಗ, ಭಕ್ತರು ಅಲ್ಲಿ ಕುಳಿತು ಮುಗಿಲು ಮುಟ್ಟುವ ರೀತಿಯ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದರು. ತಮ್ಮ ವಾಹನ ಸಾಗಲು ಬಿಡದಿದ್ದರೆ ಬದಲಾಗಿ ಕೆ.ಎಸ್.ಆರ್.ಟಿ.ಸಿ ಬಸ್ ಸೌಕ ರ್ಯಗಳನ್ನಾದರೂ ಏರ್ಪಡಿಸಿ ಎಂದು ಭಕ್ತರು ಆಗ್ರಹಿಸಿದರು. ಪೊಲೀಸರು ಸರಕಾರದ ಕೈಗೊಂಬೆಯಾಗಿ ವರ್ತಿಸುದ್ದಾರೆಂದು ಕೆಲವು ಭಕ್ತರು ಆರೋಪಿಸಿದರು. ಭಕ್ತರ ಪ್ರತಿಭಟನೆ ತೀವ್ರಗೊಳ್ಳತೊಡಗಿದಾಗ  ಇಂದು ಬೆಳಿಗ್ಗೆ ಎರುಮೇಲಿಯಿಂದ ಪಂಪಾಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಸೇವೆ ಆರಂಭಿಸಲು ಪೊಲೀಸರು ಅನುಮತಿ ನೀಡಿದ್ದಾರೆ.  ನಾಳೆ ರಾತ್ರಿ ೧೦ ಗಂಟೆಗೆ ಗರ್ಭಗುಡಿಯ ಬಾಗಿಲು ಮುಚ್ಚಲಾಗುವುದು.

NO COMMENTS

LEAVE A REPLY