ನಾಪತ್ತೆಯಾಗಿದ್ದ ವೃದ್ಧನ ಮೃತದೇಹ ಕೆರೆಯಲ್ಲಿ ಪತ್ತೆ

0
22

ಉಪ್ಪಳ: ನಾಪತ್ತೆಯಾಗಿದ್ದ ಬಂದ್ಯೋಡು ಬಳಿಯ ಬಿ.ಸಿರೋಡು ನೀರಮೂಲೆ ನಿವಾಸಿ ತನಿಯಪ್ಪ ನಾಯ್ಕ್(೭೫)ರ ಮೃತದೇಹ ಮನೆ ಸಮೀಪದ ತೋಟದಲ್ಲಿನ ಕೆರೆಯಲ್ಲಿ ಪತ್ತೆಯಾಗಿದೆ. ಟೈಲರ್ ಆಗಿದ್ದ ಇವರು ಮೊನ್ನೆ ಬೆಳಿಗ್ಗೆ ಹೊರ ಹೋದವರು ಹಿಂತಿರುಗಿ ಬಾರದ ಹಿನ್ನೆಲೆಯಲ್ಲಿ ಸಂಬಂಧಿಕರ ಸಹಿತ ಸ್ಥಳೀಯರು ಹುಡುಕಾಡುತ್ತಿದ್ದ ಮಧ್ಯೆ ಮನೆಯಿಂದ ಅಲ್ಪ ದೂರದ ತೋಟದಲ್ಲಿರುವ ಕೆರೆಯಲ್ಲಿ ನಿನ್ನೆ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ. ಬಳಿಕ ಉಪ್ಪಳ ಅಗ್ನಿಶಾಮಕದಳ, ಕುಂಬಳೆ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಮೇಲೆತ್ತಿ, ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ಮಹಜರು ನಡೆಸಿದ ಬಳಿಕ ನಿನ್ನೆ ಸಂಜೆ ಮನೆ ಪರಿಸರದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಮೃತರು ಪತ್ನಿ ಸೀತಾ, ಮಕ್ಕಳಾದ ಚಂದ್ರಮೋಹನ, ವಿದ್ಯಾಲಕ್ಷ್ಮಿ, ಸೊಸೆ ರೇಖಾ, ಅಳಿಯ ಮಹಾಲಿಂಗ, ಸಹೋದರ ರಾದ ಈಶ್ವರ, ಮಹಾಲಿಂಗ, ಚಂದ್ರಹಾಸ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಬ್ಲೋಕ್ ಪಂ. ಸದಸ್ಯ ಪ್ರಸಾದ್ ರೈ ಕಯ್ಯಾರು, ವಾರ್ಡ್ ಪ್ರತಿನಿಧಿ ರೇವತಿ, ಸುಬ್ಬ ನಾಯ್ಕ್, ಬಿಜೆಪಿ ನೇತಾರ ಸುರೇಶ್ ಶೆಟ್ಟಿ ಹೇರೂರು ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.

NO COMMENTS

LEAVE A REPLY