ನಿಲ್ಲಿಸಿದ್ದ ವಾಹನ ಬೆಂಕಿಗಾಹುತಿ

0
18

ಮಂಜೇಶ್ವರ: ನಿಲ್ಲಿಸಿದ್ದ ಬೊಲೆರೋ ವಾಹನ ಬೆಂಕಿಗಾಹುತಿ ಯಾದ ಘಟನೆ ನಿನ್ನೆ ಮಧ್ಯಾಹ್ನ ತಲಪಾಡಿಯಲ್ಲಿ ನಡೆದಿದೆ. ಉದ್ಯಾವರ ನಿವಾಸಿ ಮುಸ್ತಫ ಎಂಬವರ ಮಾಲಕತ್ವದ ವಾಹನ ಉರಿದು ನಾಶಗೊಂಡಿದೆ. ತಲಪಾಡಿ ಮಿಲ್ಮಾ ಡೈರಿಯಿಂದ ಹಾಲು ಕೊಂಡೊಯ್ಯಲೆಂದು ನಿನ್ನೆ ಮಧ್ಯಾಹ್ನ ೧೨.೩೦ರ ವೇಳೆ ವಾಹನ ತಲುಪಿತ್ತು. ಡೈರಿಯ ಮುಂಭಾಗದಲ್ಲಿ ನಿಲ್ಲಿಸಿದ್ದ ವಾಹನದ ಇಂಜಿನ್ ಉರಿಯತೊ ಡಗಿದ್ದು, ಕೂಡಲೇ ಪರಿಸರ ನಿವಾಸಿ ಗಳು ನಂದಿಸುವ ಷ್ಟರೊಳಗೆ ಉರಿದು ಬಹುತೇಕ ನಾಶಗೊಂಡಿದೆ. ಮಂಜೇಶ್ವರ ಪೊಲೀ ಸರು ಕೇಸು ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY