ಸಂಗಮ ಸ್ಥಳದಲ್ಲಿ ಸ್ನಾನಕ್ಕಿಳಿದ ವಿದ್ಯಾರ್ಥಿ ನೀರಿನ ಸೆಳೆತಕ್ಕೆ ಸಿಲುಕಿ ಮೃತ್ಯು

0
28

ಮಂಜೇಶ್ವರ: ಕಡಪ್ಪುರದಲ್ಲಿ ಸ್ನಾನ ಮಾಡುತ್ತಿದ್ದ ವಿದ್ಯಾರ್ಥಿ ನೀರಿನ ಸೆಳೆತಕ್ಕೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಹೊಸಬೆಟ್ಟುವಿನಲ್ಲಿ ನಡೆದಿದೆ. ಹೊಸಬೆಟ್ಟುವಿನ ನದಿ, ಸಮುದ್ರ ಸಂಗಮ ಸ್ಥಳದಲ್ಲಿ ಸ್ನಾನಕ್ಕಿಳಿದ ಕುಂಜತ್ತೂರು ಕುಚ್ಚಿಕ್ಕಾಡು ನಿವಾಸಿ ದಿ|ಇಬ್ರಾಹಿಂ ಎಂಬವರ ಪುತ್ರ ಇರ್ಫಾನ್(೧೩) ಮೃತಪಟ್ಟ ಬಾಲಕ. ಈತ ಮಂಜೇಶ್ವರ ದಾರುಲ್ ಖುರ್‌ಆನ್ ಇಂಗ್ಲೀಷ್ ಮಾಧ್ಯಮ ಶಾಲೆಯ ೭ನೇ ತರಗತಿ ವಿದ್ಯಾರ್ಥಿ ಯಾಗಿದ್ದಾನೆ.

ನಿನ್ನೆ ಸಹೋದರನೊಂದಿಗೆ ಕಡಪ್ಪುರಕ್ಕೆ ಸ್ನಾನಕ್ಕೆ ತೆರಳಿದ್ದು, ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿದ್ದಾನೆ. ಕೂಡಲೇ ಸಹೋದರ ಬೊಬ್ಬೆ ಹೊಡೆದಿದ್ದು, ಸ್ಥಳೀಯರು, ಉಪ್ಪಳ ಅಗ್ನಿಶಾಮಕದಳ ಶೋಧ ನಡೆಸಿ ದರೂ ಪತ್ತೆಹಚ್ಚಲು ಸಾಧ್ಯವಾಗಿ ರಲಿಲ್ಲ. ಶೋಧ ಕಾರ್ಯಾಚರಣೆ ಮುಂದುವರಿಸುತ್ತಿ ದ್ದಂತೆ ಇಂದು ಮುಂಜಾನೆ ನೀರಿಗಿಳಿದ ಸ್ಥಳದಲ್ಲೇ ಮೃತದೇಹ ಪತ್ತೆಯಾಗಿದೆ. ಇದೀಗ ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

ಮೃತ ಬಾಲಕ ತಾಯಿ ಫಾತಿಮತ್ ಜುಹರ, ಸಹೋದರರಾದ ಇಬ್‌ಜಾರ್, ಇಶಾಂ, ಇಮ್ರಾನ್ ಹಾಗೂ ಬಂಧುಮಿತ್ರರನ್ನು ಅಗಲಿದ್ದಾನೆ.

NO COMMENTS

LEAVE A REPLY