ಹರಿದು ಬರುತ್ತಿರುವ ಭಕ್ತರ ಮಹಾಪ್ರವಾಹ: ತಪ್ಪು ಗ್ರಹಿಸಿ ಮಹಿಳೆಯ ತಡೆ, ಬಳಿಕ ದರ್ಶನ

0
27

ಶಬರಿಮಲೆ: ಚಿತ್ತಿರ ಆಟ್ಟ ವಿಶೇಷ ಪೂಜೆಗಾಗಿ ಶಬರಿಮಲೆ ದೇಗುಲದ ಬಾಗಿಲು ನಿನ್ನೆ ಸಂಜೆ ತೆರೆದಿರುವಂತೆಯೇ ಭಕ್ತರ ಮಹಾ ಪ್ರವಾಹವೇ ಹರಿದು ಬರತೊಡಗಿದೆ. ಈ ಹಿಂದಿನ ವರ್ಷ ಕ್ಕಿಂತಲೂ ಮೂರು ಪಟ್ಟು ಅಧಿಕ ಭಕ್ತರು ಶಬರಿಮಲೆಗೆ ಆಗಮಿಸಿದ್ದಾರೆಂಬುವುದು ಪೊಲೀಸರ ಲೆಕ್ಕಾಚಾರವಾಗಿದೆ. ನಿನ್ನೆ ಮಾತ್ರವಾಗಿ ಶಬರಿಮಲೆಗೆ ೧೫,೦೦೦ ರಷ್ಟು ಭಕ್ತರು ಸನ್ನಿಧಾನ ತಲುಪಿದ್ದಾರೆಂಬು ವುದು ಪೊಲೀಸರ ಅಂದಾಜು ಲೆಕ್ಕಾ ಚಾರವಾಗಿದೆ. ಶ್ರೀದೇಗುಲದ ಬಾಗಿಲು ಇಂದು ರಾತ್ರಿ ೧೦ ಗಂಟೆ ತನಕ ದರ್ಶನಕ್ಕಾಗಿ ತೆರೆದು ಕೊಡಲಾಗುವುದು. ಆ ವೇಳೆ ಇನ್ನಷ್ಟು ಭಕ್ತರ ಪ್ರವಾಹ  ಹರಿದು ಬರುವ ಸಾಧ್ಯತೆ ಇದೆ.

ಶಬರಿಮಲೆ ದರ್ಶನಕ್ಕಾಗಿ ಇಂದು ಬೆಳಿಗ್ಗೆ ತೃಶೂರಿನ ಲಲಿತ, ಗಿರಿಜಾ ಮತ್ತು ಇನ್ನೋರ್ವೆ ತಲುಪಿದ್ದು ಅವರ ಪ್ರಾಯದ ಮೇಲೆ ಸಂಶಯ ವ್ಯಕ್ತಪಡಿಸಿ ಭಕ್ತರು  ಸನ್ನಿಧಾನ ಬಳಿ ತಡೆದು ಘೋಷಣೆ ಮೊಳಗಿಸಿದ್ದಾರೆ. ಆ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಆ ಮೂವರು ಮಹಿಳೆಯರ ಗುರುತು ಚೀಟಿ ಪರಿಶೀಲಿಸಿದಾಗ ಅವರು ೫೦ ವರ್ಷ ಪ್ರಾಯ ಹೊಂದಿದವರಾಗಿ ದ್ದಾರೆಂದು ಖಾತರಿಪಡಿಸಿದಾಗ ಪ್ರತಿಭಟನೆಯಿಂದ ಭಕ್ತರು ಹಿಂದಕ್ಕೆ ಸರಿದಿದ್ದಾರೆ. ಬಳಿಕ ಲಲಿತ ಮತ್ತಿತರರು ದೇವರ ದರ್ಶನ ಪಡೆದರು. ಇದೇ ವೇಳೆ ಪ್ರತಿಭಟನೆ ವೇಳೆ ತನ್ನ ಮೇಲೆ ಹಲ್ಲೆ ನಡೆಸಲೆತ್ನಿಸಿರುವುದಾಗಿ ಲಲಿತ ಆರೋಪಿಸಿದ್ದು, ಆ ಹಿನ್ನೆಲೆಯಲ್ಲಿ ದರ್ಶನ ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅವರು  ಇರುಮುಡಿ ಹೊಂದದೆ ದರ್ಶನಕ್ಕೆ ಬಂದಿರುವುದನ್ನು ತಿಳಿದು ಭಕ್ತರು ತಪ್ಪು ತಿಳಿದು ತಡೆಯಲು ಮುಂದಾಗಲು ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಸಣ್ಣಪುಟ್ಟ ಪ್ರತಿಭಟನೆಗಳು ನಡೆದರೂ ಶಬರಿಮಲೆಯ ಸ್ಥಿತಿಗತಿಗಳು ಈತನಕ ಸುಗಮವಾಗಿಯೇ ಸಾಗುತ್ತಿದೆ. ಎಲ್ಲವನ್ನು ಪೊಲೀಸರು ಪೂರ್ಣವಾಗಿ ನಿಯಂತ್ರಿಸುತ್ತಿದ್ದಾರೆ.

NO COMMENTS

LEAVE A REPLY