ದೇವಸ್ವಂ ಮಂಡಳಿ ಮೇಲೆ ಸರಕಾರದ ಅಧಿಕಾರ ಪ್ರಯೋಗ ಬೇಡ-ಹೈಕೋರ್ಟ್

0
44

ಕೊಚ್ಚಿ: ಶಬರಿಮಲೆ ದೇಗುಲಕ್ಕೆ ಸಂಬಂಧಿಸಿದ ದೇವಸ್ವಂ ಮಂಡಳಿಯ ದೈನಂದಿನ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸುವ ಅಧಿಕಾರ ಸರಕಾರ ಹೊಂದಿಲ್ಲ ವೆಂದೂ ರಾಜ್ಯ ಹೈಕೋರ್ಟ್ ಸ್ಪಷ್ಟಪಡಿ ಸಿದೆ. ದೇವಸ್ವಂ ಮಂಡಳಿ ಮೇಲೆ ಸರಕಾರ ತನ್ನ ಅಧಿಕಾರ ಪ್ರಯೋಗಿಸಬಾರದು. ಇದೇ ವೇಳೆ ಕಾನೂನು-ಸುವ್ಯವಸ್ಥೆ ಕಾಪಾಡಿಕೊಳ್ಳಲು ಸರಕಾರ ಅಗತ್ಯದ ಕ್ರಮ ಕೈಗೊಳ್ಳಬಹುದೆಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

ದೇವಸ್ವಂ ಮಂಡಳಿಯ ವಿಷಯದಲ್ಲಿ ರಾಜ್ಯ ಸರಕಾರ ಹಸ್ತಕ್ಷೇಪ ನಡೆಸಬಾರದೆಂದು ಆಗ್ರಹಿಸಿ ಚೆನ್ನೈ ನಿವಾಸಿ ಆರ್. ರಮೇಶನ್ ಎಂಬವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು  ಪರಿಶೀಲಿಸಿದ ನ್ಯಾಯ ಮೂರ್ತಿ ಪಿ.ಆರ್. ರಾಮಚಂದ್ರ ಮೆನೋನ್ ಮತ್ತು ನ್ಯಾಯಮೂರ್ತಿ  ಎನ್. ಅನಿಲ್ ಕುಮಾರ್‌ರನ್ನೊಳ ಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ ಈ ನಿರ್ದೇಶ ನೀಡಿದೆ.

ಈ ವಿಷಯದಲ್ಲಿ ಸರಕಾರ ಮತ್ತು ದೇವಸ್ವಂ ಮಂಡಳಿ ಸ್ಪಷ್ಟೀಕರಣೆ ನೀಡುವಂತೆಯೂ ನ್ಯಾಯಾಲಯ ಆದೇಶ ನೀಡಿದೆ. ಶಬರಿಮಲೆಯಲ್ಲಿ ಪೊಲೀಸರು ನಡೆಸಿದ ದೌರ್ಜನ್ಯಗಳನ್ನು ಅವರ ಕರ್ತವ್ಯ ನಿರ್ವಹಣೆಯ ಒಂದು ಭಾಗವಾಗಿತ್ತು ಎಂಬುವುದಾಗಿ ಮೇಲ್ನೋಟಕ್ಕೆ ಕಾಣುವಂತಿಲ್ಲ ವೆಂದು ನ್ಯಾಯಾಲಯ ಇದೇ ವೇಳೆ ಸ್ಪಷ್ಟಪಡಿಸಿದೆ. ಶಬರಿಮಲೆಯಲ್ಲಿ  ದೌರ್ಜನ್ಯ ನಡೆಸಿದ ಪೊಲೀಸರನ್ನು ಡಿಜಿಪಿ ನೇರವಾಗಿ ಅಥವಾ ಇತರ ಉನ್ನತ ಅಧಿಕಾರಿಗಳ ಮೂಲಕ ಗುರುತಿಸಿ, ಅಂತಹ ಪೊಲೀಸರ  ವಿರುದ್ಧ ಮುಂದಿನ ಹತ್ತು ದಿನಗಳೊಳಗಾಗಿ ಸೂಕ್ತ ಕ್ರಮ ಕೈಗೊಂಡು ಆ ಕುರಿತಾದ ವರದಿ ಸಲ್ಲಿಸುವಂತೆಯೂ ನ್ಯಾಯಾಲಯ ಆದೇಶ ನೀಡಿದೆ. ಈ ಬಗ್ಗೆ ಐ.ಜಿ ಮೂಲಕ ಡಿಜಿಪಿ ತನಿಖೆ ನಡೆಸಿ ಅಗತ್ಯದ ಕ್ರಮ ಕೈಗೊಳ್ಳುವರೆಂದು ಸರಕಾರ ಪರವಾಗಿ ವಾದಿಸಿದ ಸ್ಟೇಟ್ ಅಟಾರ್ನಿ ಜನರಲ್ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.

ಶಬರಿಮಲೆಯಲ್ಲಿ ಭಕ್ತರ ಮೇಲೆ ಪೊಲೀಸರು ದೌರ್ಜನ್ಯವೆಸಗಿರುವುದಾಗಿ ಆರೋಪಿಸಿ ಮೂರು ಅರ್ಜಿಗಳು ಹೈಕೋರ್ಟ್‌ಗೆ ಸಲ್ಲಿಸಲಾಗಿತ್ತು. ಆ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ನ್ಯಾಯಾಲಯ ಸರಕಾರಕ್ಕೆ ಈ ನಿರ್ದೇಶ ನೀಡಿದೆ.

NO COMMENTS

LEAVE A REPLY