೧೬ರಿಂದ ಮತ್ತೆ ತೆರೆಯಲಿರುವ ಶಬರಿಮಲೆ ಬಾಗಿಲು; ೧೩ರ ಸು.ಕೋರ್ಟ್‌ನ ನಿಲುವಿನತ್ತ ಎಲ್ಲರ ಚಿತ್ತ

0
28

ಶಬರಿಮಲೆ: ಚಿತ್ತಿರಾ ಆಟ್ಟ ವಿಶೇಷ ಪೂಜೆ ಕೆಲವೊಂದು ಸಣ್ಣಪುಟ್ಟ ಘರ್ಷಣೆಯನ್ನು ಹೊರತುಪಡಿಸಿದಲ್ಲಿ ಸುಗಮವಾಗಿ ನಡೆಯುವ ಮೂಲಕ ಶಬರಿಮಲೆಯನ್ನು ಆವರಿಸಿದ ಆತಂಕಗಳ ಕ್ಷಣಗಳು ನಿನ್ನೆ ರಾತ್ರಿ ಶ್ರೀ ಕ್ಷೇತ್ರದ ಗರ್ಭಗುಡಿ ಬಾಗಿಲು ಮುಚ್ಚುವ ಮೂಲಕ ತಾತ್ಕಾಲಿಕವಾಗಿ ಮಲೆ ಇಳಿದಿದೆ.

ಇನ್ನು ಮಂಡಲ ಪೂಜಾ ಮಹೋತ್ಸವ ತೀರ್ಥಾಟನೆಗಾಗಿ ನವೆಂಬರ್ ೧೬ (ತುಲಾ ಮಾಸ ೩೦)ರಂದು ಶ್ರೀ ಕ್ಷೇತ್ರದ ಬಾಗಿಲು ಮತ್ತೆ ತೆರೆಯಲಿದೆ. ಹದಿನೆಂಟು ಮೆಟ್ಟಿಲು ಪೂಜೆ ಬಳಿಕ ಶಬರಿಮಲೆ ನಿನ್ನೆ ರಾತ್ರಿ ೧೦ ಗಂಟೆಗೆ ಶ್ರೀ ಕ್ಷೇತ್ರದ ಗರ್ಭಗುಡಿ ಬಾಗಿಲು ಮುಚ್ಚಲಾಗಿದೆ. ಶಬರಿಮಲೆಯ ಪ್ರಧಾನ ಅರ್ಚಕ ಉಣ್ಣಿಕೃಷ್ಣನ್ ನಂಬೂದಿರಿ ಮತ್ತು ಮಾಳಿಗಪುರ ಕ್ಷೇತ್ರದ ಪ್ರಧಾನ ಅರ್ಚಕ ಅನೀಶ್ ನಂಬೂದಿರಿಯವರ ಸೇವಾ ಅವಧಿ ನವೆಂಬರ್ ೩೦ರಂದು ಕೊನೆಗೊಳ್ಳಲಿದೆ.

ತೆರವುಗೊಳ್ಳಲಿರುವ ಈ  ಅರ್ಚಕರ ಸ್ಥಾನಗಳಿಗೆ ಹೊಸ ಅರ್ಚಕರ ಆಯ್ಕೆ ಈಗಾಗಲೇ ನಡೆಸಲಾಗಿದೆ. ಇದರಂತೆ ಶಬರಿಮಲೆಗೆ ಪ್ರಧಾನ ಅರ್ಚಕರಾಗಿ ಹೊಸದಾಗಿ ಆರಿಸಲ್ಪಟ್ಟ ವಾಸುದೇವನ್ ನಂಬೂದಿರಿ ಮತ್ತು ಮಾಳಿಗಪುರತ್ತಮ್ಮ ಕ್ಷೇತ್ರದ ಪ್ರಧಾನ ಅರ್ಚಕರಾಗಿ ಆರಿಸಲ್ಪಟ್ಟ ನಾರಾಯಣನ್ ನಂಬೂದಿರಿಯವರು ೧೬ರಂದು ಇರುಮುಡಿ ಹೇರಿ ಶ್ರೀ ಕ್ಷೇತ್ರಕ್ಕೆ ಆಗಮಿಸುವರು. ಬಳಿಕ ವೃಶ್ಚಿಕಮಾಸ ಒಂದರಂದು ಮುಂಜಾನೆ ಈ ಇಬ್ಬರು ಅರ್ಚರು ವಿದ್ಯುಕ್ತವಾಗಿ ಸ್ಥಾನ ವಹಿಸುವರು.

ಇದೇ ವೇಳೆ ಶಬರಿಮಲೆಗೆ ಎಲ್ಲಾ ವಯೋಮಿತಿಗೆ ಸೇರಿದ ಮಹಿಳೆಯರಿಗೆ ಪ್ರವೇಶ ಅವಕಾಶ ನೀಡಿದ ಸುಪ್ರೀಂಕೋ ರ್ಟ್‌ನ ತೀರ್ಪಿನ ವಿರುದ್ಧ ಸಲ್ಲಿಸಲಾದ ರಿಟ್ ಅರ್ಜಿಗಳನ್ನು ಮತ್ತು ಮರು ಪರಿಶೀಲನಾ ಅರ್ಜಿಗಳನ್ನು ಈ ತಿಂಗಳ ೧೩ರಂದು ತೆರೆದ ನ್ಯಾಯಾಲಯದಲ್ಲಿ ಸುಪ್ರೀಂಕೋರ್ಟ್ ಪರಿಶೀಲಿಸಿ, ಆ ಕುರಿತಾದ ವಾದ ಪ್ರತಿವಾದ ಆಲಿಸಲಿದೆ. ಬಳಿಕ ನ್ಯಾಯಾಲಯ ಈ ವಿಷಯದಲ್ಲಿ ನೀಡಲಿರುವ ತೀರ್ಪು ಶಬರಿಮಲೆಗೆ ಸಂಬಂ ಧಿಸಿ ಅತ್ಯಂತ ನಿರ್ಣಾಯಕವಾಗ ಲಿದೆ.

 

NO COMMENTS

LEAVE A REPLY