ಎನ್.ಡಿ.ಎಯ ಶಬರಿಮಲೆ ಸಂರಕ್ಷಣಾ ಯಾತ್ರೆ, ಕಾಂಗ್ರೆಸ್‌ನ ವಿಶ್ವಾಸ ಸಂರಕ್ಷಣಾ ಯಾತ್ರೆಗಳಿಗೆ ನಾಳೆ ಚಾಲನೆ

0
57

ಕಾಸರಗೋಡು: ಶಬರಿಮಲೆ ಆಚಾರ-ಅನುಷ್ಠಾನಗಳನ್ನು ಸಂರಕ್ಷಿಸಬೇಕು ಮತ್ತು ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಅಯ್ಯಪ್ಪ ಭಕ್ತರ ವಿರುದ್ಧ ಕೇಸು ದಾಖಲಿಸಿ ಅವರನ್ನು ಬಂಧಿಸುವ ರಾಜ್ಯ ಸರಕಾರ ನೀತಿಯನ್ನು ಪ್ರತಿಭಟಿಸಿ ಎನ್.ಡಿ.ಎ. ನೇತಾರರಾದ ನ್ಯಾಯವಾದಿ ಪಿ.ಎಸ್. ಶ್ರೀಧರನ್ ಪಿಳ್ಳೆ ಮತ್ತು ತುಷಾರ್ ವೆಳ್ಳಾಪಳ್ಳಿ(ಬಿಡಿಜೆಎಸ್ ಅಧ್ಯಕ್ಷ)ರ ನೇತೃತ್ವದ ಶಬರಿಮಲೆ ಸಂರಕ್ಷಣಾ ಯಾತ್ರೆಗೆ ನಾಳೆ ಮಧೂರು ಶ್ರೀ ಸಿದ್ದಿವಿನಾಯಕ ಕ್ಷೇತ್ರ ಪರಿಸರದಿಂದ ಚಾಲನೆ ಲಭಿಸಲಿದೆ.

ಇದೇ ವೇಳೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಕೆ. ಸುಧಾಕರನ್ ನೇತೃತ್ವದಲ್ಲಿ ನಾಳೆ ಅಪರಾಹ್ನ ಪೆರ್ಲ ಪೇಟೆಯಿಂದ ವಿಶ್ವಾಸ ಸಂರಕ್ಷಣಾ ಯಾತ್ರೆಯೂ ಪ್ರಯಾಣ ಆರಂಭಿಸಲಿದೆ.

ಬಿಜೆಪಿಯ ಸಂರಕ್ಷಣಾ ಯಾತ್ರೆ ನಾಳೆ ೧೦ ಗಂಟೆಗೆ ಮಧೂರಿನಲ್ಲಿ ಉದ್ಘಾಟನೆಗೊಂಡು, ಅಪರಾಹ್ನ ೨ ಗಂಟೆಗೆ ನಗರದ ಕರಂದಕ್ಕಾಡಿನಿಂದ ಬೃಹತ್ ಮೆರವಣಿಗೆಯೊಂದಿಗೆ ನಗರ  ಪ್ರದಕ್ಷಿಣೆ ನಡೆಸಿ ಅದ್ದೂರಿಯ ಸ್ವಾಗತ ನೀಡಿದ ಬಳಿಕ   ನೀಲೇಶ್ವರಕ್ಕೆ ಸಾಗಲಿದೆ. ಮಧೂರಿನಿಂದ ಆರಂಭಗೊಳ್ಳುವ ರಥಯಾತ್ರೆಯನ್ನು ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸುವರು. ಕರ್ನಾಟಕ ವಿಧಾನಪರಿಷತ್ ನೇತಾರ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿಯ ಕೇರಳ ಪ್ರಭಾರಿ ಸಂಸದ ನಳಿನ್ ಕುಮಾರ್ ಕಟೀಲು ರಾಜ್ಯಸಭಾ ಸದಸ್ಯ ಪಿ. ಮುರಳೀಧರನ್, ಕೇರಳ ಕಾಂಗ್ರೆಸ್ ನೇತಾರ ಮಾಜಿ ಸಚಿವ ಪಿ.ಸಿ. ಥೋಮಸ್, ಶಾಸಕರಾದ ಸಂಜೀವ ಮಠಂದೂರು, ದೇವದಾಸ್ ಕಾಮತ್, ಹರೀಶ್‌ಪೂಂಜಾ, ಅಂಗಾರ, ಮಾಜಿ ಶಾಸಕ ರಾಜನ್ ಬಾಬು, ಶಾಸಕ ಒ. ರಾಜಗೋಪಾಲ್, ಬಿಜೆಪಿ ನೇತಾರರಾದ ಪಿ.ಕೆ.ಕೃಷ್ಣದಾಸ್, ಸಿ.ಕೆ. ಪದ್ಮನಾಭನ್, ಕೆ. ಸುರೇಂದ್ರನ್, ಎ.ಎನ್. ರಾಧಾಕೃಷ್ಣನ್, ಶೋಭಾ ಸುರೇಂದ್ರನ್, ಎಂ.ಟಿ. ರಮೇಶ್ ಮೊದ ಲಾದವರು ಭಾಗವಹಿಸಿ ಮಾತನಾಡುವರು. ಈ ರಥಯಾತ್ರೆ   ಹಲವು ಜಿಲ್ಲೆಗಳಲ್ಲಿ ಪರ್ಯಟನೆ ನಡೆಸಿದ ಬಳಿಕ ನ. ೧೩ರಂದು ಪತ್ತನಂತಿಟ್ಟ ಜಿಲ್ಲೆಯಲ್ಲಿ ಬೃಹತ್ ರ‍್ಯಾಲಿ ಯೊಂದಿಗೆ ಸಮಾಪ್ತಿ ಹೊಂದಲಿದೆ.

ಕೆ. ಸುಧಾಕರನ್‌ರ ನೇತೃತ್ವದಲ್ಲಿ ನಾಳೆ ಅಪರಾಹ್ನ ೩.೩೦ಕ್ಕೆ ಆರಂಭಗೊಳ್ಳುವ ಕಾಂಗ್ರೆಸ್‌ನ ವಿಶ್ವಾಸ ಸಂರಕ್ಷಣಾ ಯಾತ್ರೆಯನ್ನು ಕಾಂಗ್ರೆಸ್‌ನ ಮಾಜಿ ರಾಜ್ಯ ಅಧ್ಯಕ್ಷ ಎಂ.ಎಂ. ಹಸ್ಸನ್ ಉದ್ಘಾಟಿಸುವರು. ಕಾಂಗ್ರೆಸ್ ನೇತೃತ್ವದಲ್ಲಿ ರಾಜ್ಯದ ವಿವಿಧೆಡೆಗಳಿಂದ ನಾಳೆ ಒಟ್ಟು ಐದು ಯಾತ್ರೆಗಳು ಆರಂಭಗೊಳ್ಳಲಿದೆ. ಇದರಂತೆ ತಿರುವನಂತಪುರದಿಂದ ಕೆ. ಮುರಳೀಧರನ್, ಪಾಲ್ಘಾಟ್‌ನಿಂದ ಶಾನಿಮೋಳ್ ಉಸ್ಮಾನ್, ಆಲಪ್ಪುಳ ದಿಂದ ಸಂಸದ ಕೊಡಿಕುನ್ನಿಲ್ ಸುರೇಶ್ ಮತ್ತು ಕೋಟ್ಟಯಂನಿಂದ ತಿರುವಾಂ ಜೂರು ರಾಧಾಕೃಷ್ಣನ್ ನೇತೃತ್ವದಲ್ಲಿ ಬೇರೆ ನಾಲ್ಕು ಯಾತ್ರೆ ಪ್ರಯಾಣ ಆರಂಭಿಸಲಿದೆ. ಈ ಐದು ಯಾತ್ರೆಗಳು ನವೆಂಬರ್ ೧೫ರಂದು ಪತ್ತನಂತಿಟ್ಟದಲ್ಲಿ ಸಮಾಪ್ತಿ ಹೊಂದಲಿದೆ. ಸಮಾರೋಪ ಸಮಾರಂಭ ವನ್ನು ಕಾಂಗ್ರೆಸ್‌ನ ಹಿರಿಯ ಮುತ್ಸದ್ಧಿ ಎ.ಕೆ. ಆಂಟನಿ ಉದ್ಘಾಟಿಸುವರು.

ಪೆರ್ಲದಿಂದ ನಾಳೆ ಆರಂಭಗೊ ಳ್ಳುವ ಯಾತ್ರೆಯಲ್ಲಿ ಸತೀಶನ್ ಪಾಚೇನಿ, ಐ.ಎನ್.ಟಿ.ಯು.ಸಿ ಕೇಂದ್ರ ನೇತಾರ ಸುರೇಂದ್ರನ್, ಶಾಸಕ ಸಿ.ವಿ. ವಿಶ್ವನಾಥ್, ಎಣ್ಮಕಜೆ ಪಂಚಾಯತ್‌ನ ಮಾಜಿ ಅಧ್ಯಕ್ಷ ಸೋಮಶೇಖರ ಕೆ.ಎಸ್. ಸೇರಿದಂತೆ ಹಲವು ಗಣ್ಯರು ಮಾತನಾಡುವರು.

NO COMMENTS

LEAVE A REPLY