ನಾಪತ್ತೆಯಾಗಿದ್ದ ವೃದ್ಧ ಪತ್ತೆ

0
21

ಮಂಜೇಶ್ವರ: ನಾಪತ್ತೆಯಾಗಿದ್ದ ಮೀಯಪದವು ಮುಂದಿಲ ನಿವಾಸಿ ಮಹಾಬಲೇಶ್ವರ ಭಟ್(೬೯)ರನ್ನು ದೇರಳಕಟ್ಟೆ ಆಸ್ಪತ್ರೆಯಿಂದ ಪತ್ತೆಹಚ್ಚಲಾಗಿದೆ. ಈ ತಿಂಗಳ ೨ರಿಂದ ಇವರು ನಾಪತ್ತೆಯಾಗಿದ್ದು ಈ ಬಗ್ಗೆ ಮಂಜೇಶ್ವರ ಠಾಣೆಗೆ ದೂರು ನೀಡಿ ಹುಡುಕಾಡುತ್ತಿರುವಂತೆ ದೇರಳಕಟ್ಟೆ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದಾರೆ. ಮನೆಯವರು ಆಸ್ಪತ್ರೆಗೆ ತೆರಳಿ ಕರೆದುಕೊಂಡು ಬಂದು ಠಾಣೆಗೆ ಹಾಜರುಪಡಿಸಿ ಬಳಿಕ ಮನೆಗೆ ಕೊಂಡು ಹೋದರು. ಮಾತು ಬಾರದ ಅವರು ಯಾಕಾಗಿ ಆಸ್ಪತ್ರೆಗೆ ತೆರಳಿದ್ದರೆಂದು ತಿಳಿದು ಬಂದಿಲ್ಲ.

 

NO COMMENTS

LEAVE A REPLY