ಸ್ಟೇವಯರ್‌ಗೆ ಢಿಕ್ಕಿ ಹೊಡೆದ ಲಾರಿ ಮೇಲೆ ಬಿದ್ದ ವಿದ್ಯುತ್ ಕಂಬ: ತಪ್ಪಿದ ದುರಂತ

0
44

ನೀರ್ಚಾಲು: ಸ್ಟೇವಯರ್‌ಗೆ ಢಿಕ್ಕಿ ಹೊಡೆದ ಲಾರಿ ಮೇಲೆ ವಿದ್ಯುತ್ ಕಂಬ ಬಿದ್ದಿದ್ದು ಭಾರೀ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿ ಹೋಗಿದೆ.

ವಿದ್ಯುತ್ ಸರಬರಾಜು ನಡೆಯುತ್ತಿದ್ದ ವಿದ್ಯುತ್ ತಂತಿ ಹಾಗೂ ಕಂಬ ಲಾರಿಯ ಮೇಲೆ ಬಿದ್ದಿರುವುದನ್ನು ಕಂಡ ನಾಗರಿಕರು ವಿದ್ಯುತ್ ಕಚೇರಿ ಅಧಿಕಾರಿಗಳಿಗೆ ತಿಳಿಸಿದ್ದು, ತಕ್ಷಣ ಸಂಪರ್ಕ ವಿಚ್ಛೇಧಿಸಿದ ಪರಿಣಾಮ ಭಾರೀ ದುರಂತ ತಪ್ಪಿಹೋಗಿದೆ. ನಿನ್ನೆ ಸಂಜೆ ನೀರ್ಚಾಲು ವಿಷ್ಣುಮೂರ್ತಿ ನಗರ ದಲ್ಲಿ ಈ ಅಪಘಾತ ಸಂಭವಿಸಿದೆ.

NO COMMENTS

LEAVE A REPLY