ಮಂಜೇಶ್ವರ ಕ್ಷೇತ್ರ ಚುನಾವಣಾ ತಕರಾರು ಅರ್ಜಿ: ವಿಚಾರಣೆ ದ.೩ರಂದು ಮತ್ತೆ ಮುಂದುವರಿಕೆ ನಿಧನರಾದ ಶಾಸಕರ ಪರ ಕಕ್ಷಿದಾರನಾಗಿ ಪುತ್ರ

0
39

ಮಂಜೇಶ್ವರ: ಮಂಜೇಶ್ವರ ವಿಧಾನಸಭೆಯ ಚುನಾವಣಾ ತಕರಾರು ಅರ್ಜಿಯ ಮೇಲಿನ ವಿಚಾರಣೆ ದಶಂಬರ ೩ರಂದು ರಾಜ್ಯ ಹೈಕೋರ್ಟ್ ಮತ್ತೆ ಮುಂದುವರಿಸಲಿದೆ.  ಈ ಕ್ಷೇತ್ರದ ಶಾಸಕ ಪಿ.ಬಿ. ಅಬ್ದುಲ್ ರಜಾಕ್ ನಿಧನ ಹೊಂದಿ ರುವ ಹಿನ್ನೆಲೆಯಲ್ಲಿ ಅವರ ಪರವಾಗಿ ಪುತ್ರ ಶಫೀಕ್ ರಜಾಕ್ ಕಕ್ಷಿದಾರನಾಗಿ ಸೇರಲು ತೀರ್ಮಾನಿಸಿದ್ದಾರೆ.

ಅಬ್ದುಲ್ ರಜಾಕ್ ನಿಧನ ಹೊಂದಿರುವ ವಿಷಯ ವನ್ನು ನ್ಯಾಯಾಲಯಕ್ಕೆ ತಿಳಿಸುವ ಅಫಿದಾವಿತ್‌ನ್ನು ಶಫೀಕ್ ರಜಾಕ್ ನವೆಂಬರ್ ೧೨ರಂದು ಸಲ್ಲಿಸುವರು.

ಶಾಸಕ ಅಬ್ದುಲ್ ರಜಾಕ್ ನಿಧನ ಹೊಂದಿರುವ ಮಾಹಿತಿ ಯನ್ನು ಸರಕಾರಿ ಗಜೆಟ್‌ನಲ್ಲಿ ಪ್ರಕಟಿಸುವಂತೆ ಅಕ್ಟೋಬರ್ ೨೬ರಂದು ಹೈಕೋರ್ಟ್ ನಿರ್ದೇಶ ನೀಡಿತ್ತು. ಇದೇ ವೇಳೆ ಶಾಸಕ ಅಬ್ದುಲ್ ರಜಾಕ್‌ರ ನಿಧನದಿಂದಾಗಿ  ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಮೊಟಕುಗೊ ಳ್ಳುತ್ತಿದೆ ಎಂದೂ, ಅದನ್ನು ಹೊರತುಪಡಿಸಲು ಚುನಾವಣಾ ತಕರಾರು ಅರ್ಜಿ ಮೇಲಿನ ವಿಚಾರಣೆಯನ್ನು ಪೂರ್ತೀಕರಿಸಿ ಶೀಘ್ರ ತೀರ್ಪು ನೀಡಬೇಕೆಂದು ಆಗ್ರಹಿಸಿ ಮುಸ್ಲಿಂಲೀಗ್‌ನ ಮಧೂರು ಪಂಚಾಯತ್ ಸಮಿತಿ ಅಧ್ಯಕ್ಷ ಹ್ಯಾರಿಸ್ ಚೂರಿಯವರೂ ಈ ಪ್ರಕರಣದಲ್ಲಿ ಕಕ್ಷಿದಾರರಾಗಿ ಸೇರ್ಪಡೆಗೊಂಡಿದ್ದಾರೆ.

ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ವ್ಯಾಪಕ ಕಳ್ಳ ಮತ   ಮತ್ತು ನಿಧನ ಹೊಂದಿದವರ ಹೆಸರಲ್ಲ್ಲೂ ಮತ ಚಲಾಯಿಸಲಾಗಿದೆ. ಅದು ಚಲಾಯಿಸದೇ ಇರುತ್ತಿದ್ದಲ್ಲಿ ಚುನಾವಣಾ ಫಲಿತಾಂಶ ಬೇರೆಯೇ ಆಗುತ್ತಿತ್ತೆಂದೂ, ಆ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಲ್ಲಿ ಗೆದ್ದ ಪಿ.ಬಿ. ಅಬ್ದುಲ್ ರಜಾಕ್‌ರ ಆಯ್ಕೆಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಉಮೇದ್ವಾರ ಕೆ. ಸುರೇಂದ್ರನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಚುನಾವಣಾ ತಕರಾರು ಅರ್ಜಿಯ ವಿಚಾರಣೆ  ಹೈಕೋರ್ಟ್‌ನಲ್ಲಿ ಬಹುತೇಕ ಪೂರ್ಣಗೊಂಡು ಅಂತಿಮ ಹಂತಕ್ಕೆ ತಲುಪುತ್ತಿದ್ದ ವೇಳೆಯಲ್ಲೇ ಶಾಸಕ ಪಿ.ಬಿ. ಅಬ್ದುಲ್ ರಜಾಕ್ ನಿಧನಹೊಂದಿದ ಹಿನ್ನೆಲೆಯಲ್ಲಿ ಚುನಾವಣಾ ತಕರಾರು ಅರ್ಜಿ ಮೇಲಿನ ವಿಚಾರಣೆ ಇನ್ನೂ ಮುಂದು ವರಿಸಬೇಕೇ ಎಂದು ಹೈಕೋರ್ಟ್ ಪ್ರಶ್ನಿಸಿತ್ತು. ಆದರೆ ತಾನು ಅರ್ಜಿ ಹಿಂತೆಗೆದುಕೊಳ್ಳುವುದಿಲ್ಲವೆಂದೂ ಕೇಸಿನೊಂದಿಗೆ ಮುಂದಕ್ಕೆ ಸಾಗುವುದಾಗಿ ಕೆ. ಸುರೇಂದ್ರನ್ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದರು. ಈ ಕೇಸಿನ ತೀರ್ಪು ತನಗೆ ಅನುಕೂಲಕರವಾಗಲಿದೆ ಎಂಬ ನಿರೀಕ್ಷೆಯನ್ನೂ ಅವರು ವ್ಯಕ್ತಪಡಿಸಿದ್ದರು.

 

NO COMMENTS

LEAVE A REPLY