ಎನ್.ಡಿ.ಎ ಶಬರಿಮಲೆ ಸಂರಕ್ಷಣಾ ರಥಯಾತ್ರೆಗೆ ಮಧೂರಿನಲ್ಲಿ ಚಾಲನೆ

0
25

ಮಧೂರು: ಶಬರಿಮಲೆ ಕ್ಷೇತ್ರವನ್ನು ನಾಶಗೊಳಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಯತ್ನಿಸುತ್ತಿದ್ದಾ ರೆಂದು  ಬಿಜೆಪಿ  ರಾಜ್ಯ ಪ್ರಧಾನ ಕಾರ್ಯ ದರ್ಶಿ ಕೆ. ಸುರೇಂದ್ರನ್ ಆರೋಪಿಸಿದ್ದಾರೆ.

ಮಧೂರಿನಲ್ಲಿ ಇಂದು ಬೆಳಿಗ್ಗೆ ನಡೆದ ಎನ್.ಡಿ.ಎಯ ಶಬರಿಮಲೆ ಸಂರಕ್ಷಣಾ ರಥ ಯಾತ್ರೆಯ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಪಿಣರಾಯಿ ವಿಜಯನ್ ಅಭಿನವ ಟಿಪ್ಪುವಿನಂತೆ ವರ್ತಿಸುತ್ತಿದ್ದಾರೆ. ಈ ಹಿಂದೆ ಮಧೂರು ಕ್ಷೇತ್ರವನ್ನು ಕೆಡವಲು ಟಿಪ್ಪು ಸುಲ್ತಾನ್ ಪ್ರಯತ್ನಿಸಿದಂತೆಯೇ ಇದೀಗ ಶಬರಿಮಲೆ ಕ್ಷೇತ್ರವನ್ನು ನಾಶಗೊಳಿಸಲು ಪಿಣರಾಯಿ ವಿಜಯನ್ ಪ್ರಯತ್ನಿಸುತ್ತಿ ದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕೆ. ಸುಧಾಕರನ್ ನೇತೃತ್ವದ ಯಾತ್ರೆಯಿಂದ ಕಾಂಗ್ರೆಸ್‌ಗೆ ಯಾವುದೇ ಪ್ರಯೋಜನವಾಗದು. ಶಬರಿಮಲೆಯನ್ನು ಬುಡಮೇಲುಗೊಳಿಸಲು ಕಾಂಗ್ರೆಸ್‌ನ ಕೆಲವು ನೇತಾರರೂ  ಷಡ್ಯಂತ್ರ ನಡೆಸುತ್ತಿ ದ್ದಾರೆ. ಎಸ್ಟೇಟ್ ಮಾಲಕರೊಂದಿಗೆ ಸೇರಿ ಶಬರಿಮಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವುದು ಇವರ ಗುರಿಯಾಗಿದೆ. ಇದರಲ್ಲಿ ಗಲ್ಫ್‌ನ ಕೆಲವು ಉದ್ಯಮಿಗಳೂ ಒಳಗೊಂಡಿದ್ದಾರೆಂದೂ ಸುರೇಂದ್ರನ್ ಆರೋಪಿಸಿದರು.

ಶಬರಿಮಲೆ ದೇಗುಲದ ಪರಂಪ ರಾಗತ ಆಚಾರ ಅನುಷ್ಠಾನಗಳನ್ನು ಸಂರಕ್ಷಿಸಬೇಕು, ಶಬರಿಮಲೆಯಲ್ಲಿ ನಾಮಜಪ ನಡೆಸಿದ ಭಕ್ತರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಕೇಸು ದಾಖಲಿಸಿ ಬಂಧಿಸುವ ಕೇರಳ ಸರಕಾರದ ನಿಲುವನ್ನು ಪ್ರತಿಭಟಿಸಿ ಎನ್.ಡಿ.ಎ ನೇತೃತ್ವದಲ್ಲಿ ನಡೆಯುವ ಶಬರಿಮಲೆ ಸಂರಕ್ಷಣಾ ರಥ ಯಾತ್ರೆಗೆ ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ಕ್ಷೇತ್ರ ಪರಿಸರದಿಂದ ಇಂದು ಬೆಳಿಗ್ಗೆ ಅದ್ದೂರಿಯ ಚಾಲನೆ ಲಭಿಸಿದೆ.

ಎನ್.ಡಿ.ಎ ನೇತಾರರಾದ ಬಿಜೆಪಿ ರಾಜ್ಯ ಅಧ್ಯಕ್ಷ ನ್ಯಾಯವಾದಿ ಪಿ.ಎಸ್. ಶ್ರೀಧರನ್ ಪಿಳ್ಳೆ ಮತ್ತು ಬಿಡಿಜೆಎಸ್ ರಾಜ್ಯಾಧ್ಯಕ್ಷ ತುಷಾರ್ ವೆಳ್ಳಾಪಳ್ಳಿಯವರ ನೇತೃತ್ವದಲ್ಲಿ ಆರಂಭಗೊಂಡ ಶಬರಿಮಲೆ ಸಂರಕ್ಷ ಣಾ ಯಾತ್ರೆಯನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಕರ್ನಾಟಕ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬೃಹತ್ ಜನಸ್ತೋಮದ ನಡುವೆ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಸಕ ಒ. ರಾಜಗೋಪಾಲ್ ಅಧ್ಯಕ್ಷತೆ ವಹಿಸಿದರು. ಬಿಜೆಪಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು,  ಪಿ.ಕೆ.ಕೃಷ್ಣದಾಸ್, ಕೆ. ಸುರೇಂದ್ರನ್, ಎ.ಎನ್. ರಾಧಾಕೃಷ್ಣನ್, ವಿ.ಕೆ. ಸಜೀವನ್, ಸ್ವಾಮಿ ಪರಿಪೂರ್ಣಾ ನಂದ, ಎಂ.ಟಿ. ರಮೇಶ್, ಶೋಭಾ ಸುರೇಂದ್ರನ್, ರಾಜ್ಯಸಭಾ ಸದಸ್ಯ ವಿ. ಮುರಳೀಧರನ್, ಮಾಜಿ ಕೇಂದ್ರ ಸಚಿವ ಕೇರಳ ಕಾಂಗ್ರೆಸ್ ನೇತಾರ ಪಿ.ಸಿ. ಥೋಮಸ್, ಮಾಜಿ ಶಾಸಕ ರಾಜನ್‌ಬಾಬು, ಕರ್ನಾಟಕದ ಹಲವು ಶಾಸಕರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಮಾತನಾಡಿ ದರು. ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಸ್ವಾಗತಿಸಿದರು. ಯಾತ್ರೆಯಂಗವಾಗಿ ಇಂದು ಅಪರಾಹ್ನ ಕಾಸರಗೋಡು ನಗರದಲ್ಲಿ ಬೃಹತ್ ಮೆರವಣಿಗೆಯೊಂದಿಗೆ ಅದ್ದೂರಿಯ ಸ್ವಾಗತ ನೀಡಲಾಗು ವುದು.

NO COMMENTS

LEAVE A REPLY