ಗೂಡಂಗಡಿ ಸ್ಫೋಟಿಸಿ ನಾಶ: ಕೇಸು ದಾಖಲು

0
59

ಮಂಜೇಶ್ವರ: ಬಾಯಾರು ತಾಳ್ತಜೆಯಲ್ಲಿ ಉಮೇಶ(೩೮) ಎಂಬವರ ಗೂಡಂಗಡಿಯನ್ನು ಸ್ಫೋಟಿಸಿ ನಾಶಗೊಳಿ ಸಿದ ಪ್ರಕರಣ ದಲ್ಲಿ ಮಂಜೇಶ್ವರ ಪೊಲೀ ಸರು ಕೇಸು ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಶೋಧ ನಡೆಯು ತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಳೆದ ಅಕ್ಟೋಬರ್ ೧೪ರಂದು ರಾತ್ರಿ ಗೂಡಂಗಡಿಯನ್ನು ನಾಶಗೊಳಿಸಲಾಗಿತ್ತು. ಇದರಿಂದ ೨೫ ಸಾವಿರ ರೂಪಾಯಿ ನಷ್ಟ ಸಂಭವಿಸಿ ರುವುದಾಗಿ ದೂರಲಾಗಿದೆ. ಇದೇ ವೇಳೆ ಗೂಡಂಗಡಿಯನ್ನು ಸ್ಫೋಟಿಸಿ ನಾಶಗೊಳಿಸಿದ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿ ಇತ್ತೀಚೆಗೆ ಬಿಜೆಪಿ ನೇತೃತ್ವದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಗೆ ಮಾರ್ಚ್ ನಡೆಸಲಾಗಿತ್ತು. ಬಾಯಾರಿನಲ್ಲಿ ನಡೆದ ಅಯ್ಯಪ್ಪ ನಾಮ ಜಪ ಯಜ್ಞದಲ್ಲಿ ಉಮೇಶ ಭಾಗವಹಿ ಸಿದ್ದರು. ಈ ದ್ವೇಷದಿಂದ ಕಿಡಿಗೇಡಿಗಳು ಅವರ ಗೂಡಂಗಡಿ ಯನ್ನು ನಾಶಗೊಳಿಸಿ ರುವುದಾಗಿ ಆರೋಪಿಸಲಾಗಿದೆ.

NO COMMENTS

LEAVE A REPLY