ಅನಧಿಕೃತ ಕೆಂಪುಕಲ್ಲು ವಶ

0
29

ಮಾನ್ಯ: ಎರ್ಪಕಟ್ಟೆಯಲ್ಲಿರುವ ಅನಧಿಕೃತ ಕೆಂಪುಕಲ್ಲು ಕೋರೆಯಿಂದ ಸಾಗಿಸುತ್ತಿದ್ದ ಎರಡು ಲೋಡ್ ಕಲ್ಲುಗಳನ್ನು ಕಂದಾಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಎರಡು ಟೆಂಪೋಗಳನ್ನು ಕಸ್ಟಡಿಗೆ ತೆಗೆಯ ಲಾಗಿದೆ. ತಹಶೀಲ್ದಾರ್ ನಾರಾಯಣ, ಬೇಳ ಗ್ರಾಮಾಧಿಕಾರಿ ನೋಯಲ್ ರೋಡ್ರಿಗಸ್ ನೇತೃತ್ವದಲ್ಲಿ ನಿನ್ನೆ ಸಂಜೆ ಎರ್ಪಕಟ್ಟೆಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಕಲ್ಲು ಹಾಗೂ ಟೆಂಪೋಗಳನ್ನು ಭೂಗರ್ಭ ಇಲಾಖೆಗೆ ಹಸ್ತಾಂತರಿಸಲಾಗಿದೆ.

NO COMMENTS

LEAVE A REPLY