ಅನಧಿಕೃತ ಹೊಯ್ಗೆ ಸಾಗಾಟ ತಡೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ

0
18

ಕುಂಬಳೆ: ಜಿಲ್ಲೆಯ ಹೊಳೆಗಳಿಂದ ಸಂಗ್ರಹಿಸಿದ ಹೊಯ್ಗೆ ಸಾಗಾಟ ವ್ಯಾಪಕಗೊಂಡಿದ್ದು, ಇದರ ವಿರುದ್ಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳು ಕಠಿಣ ಕ್ರಮಕ್ಕೆ ಚಾಲನೆ ನೀಡಿದ್ದಾರೆ. ಇಂದು ಮುಂಜಾನೆ ನೆಲ್ಲಿಕಟ್ಟೆ ಹಾಗೂ ಕುಂಬಳೆಯಲ್ಲಿ  ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮೂರು ಲೋಡ್ ಹೊಯ್ಗೆ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ನಾಲ್ಕು ಮಂದಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದು, ಹೊಯ್ಗೆ ಸಾಗಾಟಕ್ಕೆ ಬೆಂಗಾವಲಾಗಿದ್ದ ಒಂದು ಕಾರು ಹಾಗೂ ಬೈಕ್‌ನ್ನು ವಶಪಡಿಸಲಾಗಿದೆ.

ಇಂದು ಮುಂಜಾನೆ ೧ ಗಂಟೆ ವೇಳೆ ನೆಲ್ಲಿಕಟ್ಟೆಯಲ್ಲಿ ಬದಿಯಡ್ಕ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಟಿಪ್ಪರ್ ಲಾರಿಯಲ್ಲಿ ಸಾಗಿಸುತ್ತಿದ್ದ ಒಂದು ಲೋಡ್ ಹೊಯ್ಗೆ ವಶಪಡಿಸಲಾ ಗಿದೆ. ಈ ಸಂಬಂಧ  ಉದ್ಯಾವರ ನಿವಾಸಿ ಅಬೂಬಕ್ಕರ್(೨೩) ವಿರುದ್ಧ ಕೇಸು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಎಡಿಎಂ ನೇತೃತ್ವದಲ್ಲಿ ಇಂದು ಮುಂಜಾನೆ ೨ ಗಂಟೆಗೆ ಕುಂಬಳೆ ಬಳಿಯ ನಾಯ್ಕಾಪು, ಉಳುವಾರು ಎಂಬಿಡೆಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಟಿಪ್ಪರ್ ಲಾರಿಗಳಲ್ಲಿ ಸಾಗಿಸುತ್ತಿದ್ದ ಎರಡು ಲೋಡ್ ಹೊಯ್ಗೆ ವಶಪಡಿಸಲಾ ಗಿದೆ. ಹೊಯ್ಗೆ ಸಾಗಾಟಗಾರರಿಗೆ ಬೆಂಗಾವಲಾಗಿ ಸಂಚರಿಸುತ್ತಿದ್ದ ಒಂದು ಕಾರು ಹಾಗೂ ಬೈಕ್‌ನ್ನು ವಶಪಡಿಸಲಾಗಿದೆ. ಈ ಸಂಬಂಧ ಕಳತ್ತೂರಿನ ಶಾಹುಲ್ ಹಮೀದ್ (೩೫), ಕಿದೂರಿನ ಮೊಹಮ್ಮದ್ ಫಾರೂಕ್(೩೧), ಇಚ್ಲಂಪಾಡಿಯ ಸಕರಿಯ(೨೭) ಎಂಬಿವರನ್ನು ಕಸ್ಟಡಿಗೆ ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ಗಡಿ ಪ್ರದೇಶ ಗಳಾದ ಹೊಳೆಗಳಿಂದ ಅನಧಿಕೃತವಾಗಿ ವ್ಯಾಪಕ ಹೊಯ್ಗೆ ಸಂಗ್ರಹ ನಡೆಸುತ್ತಿದ್ದು, ಈ ಹೊಯ್ಗೆಯನ್ನು ವಿವಿಧೆಡೆಗೆ ಸಾಗಿಸುವ ದಂಧೆ ತೀವ್ರಗೊಂಡಿದೆಯೆಂದು ದೂರಲಾಗಿದೆ.

NO COMMENTS

LEAVE A REPLY