ಮದ್ಯ ಸಾಗಾಟ: ಸ್ಕೂಟರ್ ಸಹಿತ ಓರ್ವ ಸೆರೆ

0
32

ಕುಂಬಳೆ: ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ಕರ್ನಾಟಕ ನಿರ್ಮಿತ ವಿದೇಶ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿ ಓರ್ವನನ್ನು ಬಂಧಿಸಿದ್ದಾರೆ. ಪಚ್ಲಂಪಾರೆ ನಿವಾಸಿ ಉದಯ ಕುಮಾರ್(೩೦) ಬಂಧಿತ ವ್ಯಕ್ತಿಯಾಗಿದ್ದಾರೆ. ಈತ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ೧೮೦ ಮಿಲ್ಲಿಯ ೪೫ ಬಾಟ್ಲಿ ಕರ್ನಾಟಕ ಮದ್ಯವನ್ನು ವಶಪಡಿಸಿಕೊಂಡಿ ರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಬಕಾರಿ ಇನ್‌ಸ್ಪೆಕ್ಟರ್ ವಿ.ವಿ. ಪ್ರಸನ್ನ ಕುಮಾರ್, ಶಶಿ, ಶಿಜಿನ್ ಕುಮಾರ್, ಬಿಜು, ಶರತ್, ಮೈಕಲ್ ಜೋಸೆಫ್ ಒಳಗೊಂಡ ತಂಡ ನಿನ್ನೆ ಸಂಜೆ ಪಚ್ಲಂಪಾರೆಯಲ್ಲಿ ಕಾರ್ಯಾಚರಣೆ ನಡೆಸಿದೆ.

NO COMMENTS

LEAVE A REPLY