ಕಾಂಗ್ರೆಸ್‌ನ ವಿಶ್ವಾಸ ಸಂರಕ್ಷಣಾ ಯಾತ್ರೆ ಪೆರ್ಲದಿಂದ ಇಂದು ಅಪರಾಹ್ನ ಚಾಲನೆ

0
38

ಪೆರ್ಲ: ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ(ಕೆ.ಪಿ.ಸಿ.ಸಿ) ಕಾರ್ಯಾಧ್ಯಕ್ಷ ಕೆ. ಸುಧಾಕರನ್‌ರ ನೇತೃತ್ವದ ವಿಶ್ವಾಸ ಸಂರಕ್ಷಣಾ ಯಾತ್ರೆ ಇಂದು ಅಪರಾಹ್ನ ೩.೩೦ಕ್ಕೆ ಪೆರ್ಲದಿಂದ ಚಾಲನೆ ಲಭಿಸಲಿದೆ.

ಪೆರ್ಲದಲ್ಲಿ ಇಂದು ಅಪರಾಹ್ನ ನಡೆಯುವ ಬೃಹತ್ ಸಮಾರಂಭದಲ್ಲಿ ಕಾಂಗ್ರೆಸ್‌ನ ಕೇರಳ ಘಟಕದ ಮಾಜಿ ಅಧ್ಯಕ್ಷ ಎಂ.ಎಂ. ಹಸನ್ ಯಾತ್ರೆ ಉದ್ಘಾಟಿಸುವರು. ಕಾಂಗ್ರೆಸ್ ನೇತಾರರಾದ ಸತೀಶನ್ ಪಾಚೇನಿ, ಶಾಸಕ ಪಿ.ಸಿ. ವಿಶ್ವನಾಥ್, ಐ.ಎನ್.ಟಿ.ಯು.ಸಿ ನೇತಾರ ಸುರೇಂದ್ರನ್, ಎಣ್ಮಕಜೆ ಗ್ರಾಮ ಪಂಚಾಯತ್‌ನ ಮಾಡಿ ಅಧ್ಯಕ್ಷ ಸೋಮಶೇಖರ ಜೆ.ಎಸ್., ನ್ಯಾಯವಾದಿ ಸುಧಾಕರ ಸೇರಿದಂತೆ ಹಲವರು ಭಾಗವಹಿಸಿ ಮಾತನಾಡುವರು. ಇದೇ ವೇಳೆ ತಿರುವನಂತಪುರ, ಪಾಲ್ಘಾಟ್, ಆಲಪ್ಪುಳ ಮತ್ತು ಕೋಟ್ಟಯಂನಿಂ ದಲೂ ಇತರ ನಾಲ್ಕು ಕಾಂಗ್ರೆಸ್‌ನ ವಿಶ್ವಾಸ ಸಂರಕ್ಷಣಾ ಯಾತ್ರೆಗಳು ಇಂದು ಪ್ರಯಾಣ ಆರಂಭಿಸಲಿದೆ. ಈ ಐದು ಯಾತ್ರೆಗಳು ನವೆಂಬರ್ ೧೫ರಂದು ಪತ್ತನಂತಿಟ್ಟದಲ್ಲಿ ಸಮಾಪ್ತಿ ಹೊಂದಲಿದೆ. ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್‌ನ ಹಿರಿಯ ನೇತಾರ ಎ.ಕೆ. ಆಂಟನಿ ಉದ್ಘಾಟಿಸುವರು.

NO COMMENTS

LEAVE A REPLY