ಹೈಡ್ರೋಜನ್ ಬಾಂಬು ಪರೀಕ್ಷಿಸಿದ ಉತ್ತರ ಕೊರಿಯಾ

0
1039

ಪಿಯೋಂಗಿಯಾನ್: ಉತ್ತರ ಕೊರಿಯಾ ದೇಶ ಹೈಡ್ರೋಜನ್ ಬಾಂಬು ಯಶಸ್ವಿ ಪರೀಕ್ಷೆ ನಡೆಸಿದೆ. ಇದು ಅಮೇರಿಕಾ ಸಹಿತ ವಿಶ್ವ ರಾಷ್ಟ್ರಗಳಿಗೆ ತೀವ್ರ ಆತಂಕ ಸೃಷ್ಟಿಸಿದೆ.

ಅಣು ಬಾಂಬ್‌ಗಿಂತಲೂ ೫೦೦ ಪಟ್ಟು ಹೆಚ್ಚು ಸಾಮರ್ಥ್ಯದ ಹೈಡ್ರೋಜನ್ ಬಾಂಬು ಪರೀಕ್ಷೆ ವೇಳೆ ರಿಕ್ಟರ್ ಸ್ಕೇಲ್‌ನಲ್ಲಿ ೫.೧ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ದೇಶದ ರಾಜಧಾನಿಯಿಂದ ೯೦ ಕಿ.ಮೀ. ದೂರದಲ್ಲಿ ಈ ಪ್ರಯೋಗ ನಡೆದಿದ್ದು, ಸುಮಾರು ೧೦ ಕಿ.ಮೀ. ದೂರ ತನಕ ಭೂಮಿ ನಡುಗಿದೆ.

ಹೈಡ್ರೋಜನ್ ಬಾಂಬು ಪರೀಕ್ಷೆ ನಡೆಸಿದುದನ್ನು ಉತ್ತರ ಕೊರಿಯಾ ಸಮರ್ಥಿಸಿಕೊಂಡಿದೆ. ಪರಮಾಣು ಬಾಂಬು ಸಹಿತ ಅತೀ ಸಾಮರ್ಥ್ಯವುಳ್ಳ ಸಕಲ  ಜೀವರಾಶಿಗಳಿಗೇ ಕಂಟಕಪ್ರಾಯ ಬಾಂಬುಗಳ ಪ್ರಯೋಗ ನಡೆಸಬಾರದೆಂದು ವಿಶ್ವ ಸಂಸ್ಥೆಯ ಒಪ್ಪಂದ ಉಲ್ಲಂಘಿಸಿ ಈ ಪರೀಕ್ಷೆ ನಡೆಸಿದುದಾಗಿ ಚೈನಾ ಸಹಿತ ವಿವಿಧ ರಾಷ್ಟ್ರಗಳು ತಿಳಿಸಿವೆ.

ಉತ್ತರ ಕೊರಿಯಾ ಹೈಡ್ರೋಜನ್ ಬಾಂಬು ಪರೀಕ್ಷೆ ನಡೆಸಿದುದರಿಂದ ತೀವ್ರ ಬೆದರಿಕೆಗೆ ಗುರಿಯಾಗಿರುವ ದಕ್ಷಿಣ ಕೊರಿಯಾ ಆಡಳಿತ ತುರ್ತು ಸಭೆ ಸೇರಿದೆ.

ಈ ಹಿಂದೆ ಉತ್ತರ ಕೊರಿಯಾ ಮೂರು ಬಾರಿ ಪರಮಾಣು ಬಾಂಬು ಪರೀಕ್ಷೆ ನಡೆಸಿದೆಯೆಂದು ತಿಳಿಸಲಾಗಿದೆ. ೨೦೦೬, ೨೦೦೯, ೨೦೧೩ರಲ್ಲಿ ಈ ಪ್ರಯೋಗ ನಡೆದಿದೆ. ಮೂರು ಬಾರಿ ಪರೀಕ್ಷೆ ನಡೆಸಿದ ಸ್ಥಳದ ಪಕ್ಕದಲ್ಲೇ ಹೈಡ್ರೋಜನ್ ಬಾಂಬು ಪರೀಕ್ಷೆಯೂ ನಡೆಸಿತೆನ್ನಲಾಗಿದೆ.

ಹೈಡ್ರೋಜನ್ ಬಾಂಬು ಪರೀಕ್ಷೆಯು ಅಮೇರಿಕಾ ದೇಶವನ್ನು ಚಿಂತೆಗೀ ಡಾಗುವಂತೆ ಮಾಡಿದೆ. ಅಧ್ಯಕ್ಷ ಬರಾಕ್ ಒಬಾಮಾ ಈ ಕುರಿತು ಹೇಳಿಕೆ ನೀಡಿ,  ಉತ್ತರ ಕೊರಿಯಾಕ್ಕೆ  ನಿಷೇದ ಹೇರುವ  ಬಗ್ಗೆ  ತೀರ್ಮಾನ ಕೈಗೊಳ್ಳಲಾಗುವು ದೆಂದು ಅವರು ತಿಳಿಸಿದ್ದಾರೆ.

NO COMMENTS

LEAVE A REPLY