ಮಂಜೇಶ್ವರದ ವ್ಯಾಪಕ ಆಕ್ರಮಣ: ೫ ಸೆರೆ; ೧೧೫ ಮಂದಿ ವಿರುದ್ಧ ಕೇಸು

0
51

ಮಂಜೇಶ್ವರ: ಶಬರಿಮಲೆಗೆ ಯುವತಿ ಪ್ರವೇಶಿಸಿರುವುದನ್ನು ಪ್ರತಿಭಟಿಸಿ ಮಂಜೇಶ್ವರದಲ್ಲಿ ಸಂಭವಿಸಿದ ಆಕ್ರಮಣಗಳಲ್ಲಿ ೧೧೫ ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಇದರಲ್ಲಿ ನಾಲ್ಕು ಮಂದಿ ವಿರುದ್ಧ ಕೊಲೆ ಯತ್ನ ಕೇಸು ದಾಖಲಿಸಲಾಗಿದೆ.

ಆರೋಪಿಗಳಲ್ಲಿ ಐದು ಮಂದಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಇವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹರತಾಳದ ದಿನದಂದು ಕಡಂಬಾರ್ ಒಳಗುಡ್ಡೆ ನಿವಾಸಿ ಕಿರಣ್ ಕುಮಾರ್(೨೭)ನಿಗೆ ಕ್ಷೇತ್ರದಲ್ಲಿ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ ಪ್ರಕರಣದಲ್ಲಿ ನಾಲ್ಕು ಮಂದಿ ವಿರುದ್ಧ ಕೊಲೆ ಯತ್ನಕ್ಕೆ ಕೇಸು ದಾಖಲಿಸಲಾಗಿದೆ. ಮೊನ್ನೆ ಮೊರತ್ತಣೆಯಲ್ಲಿ ಪೊಲೀಸರಿಗೆ ಕರ್ತವ್ಯಕ್ಕೆ ತಡೆ ಸೃಷ್ಟಿಸಿದ, ಆಕ್ರಮಿಸಿದ ಪ್ರಕರಣದಲ್ಲಿ ಸೆರೆಯಾದ ನಲ್ಲಂಗಿಕೋಡಿಯ ನವೀನ್ ಕೆ.(೨೨), ಅದೇ ದಿನ ತಲಪ್ಪಾಡಿಯ ಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪ ಡಿಸಿದ ಪ್ರಕರಣದ ಲ್ಲಿ ಬಂಧಿತನಾದ ತಲಪ್ಪಾಡಿಯ ವಸಂತ ಆಚಾರ್ಯ, ಕುಂಜತ್ತೂರಿನ ಕೀರ್ತೇಶ್ ಶೆಟ್ಟಿ(೨೫), ಪಾವೂರು ಬಜಾರ್‌ನ ಪ್ರಮೋದ್ ಕುಮಾರ್(೨೩), ಕುಂಜತ್ತೂರಿನ ಕೆ. ವಿಕ್ರಮ(೩೫) ಎಂಬಿವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.  ಮಂಜೇಶ್ವರ ಸರಕಾರಿ ಕಾಲೇಜು ಬಳಿಯ ಮನೀಶ್ ಕುಮಾರ್‌ಗೆ ಹಲ್ಲೆಗೈದ ಪ್ರಕರಣದಲ್ಲಿ ಗುರುತು ಪತ್ತೆಹಚ್ಚಬಹುದಾದ ೬ ಮಂದಿ ವಿರುದ್ಧ, ಉದ್ಯಾವರ ಕುಚ್ಚಿಕ್ಕಾಡ್‌ನ ನಿಧೀಶ್(೨೯)ನನ್ನು ಕುಂಜತ್ತೂರಿನಲ್ಲಿ ಹಲ್ಲೆಗೈದ ಪ್ರಕರಣದಲ್ಲಿ ೫೦ ಮಂದಿ ವಿರುದ್ಧ, ಕಡಂಬಾರ್ ಗಾಂಧಿನಗರದ ಇಂತಿಯಾಸ್ ನೀಡಿದ ದೂರಿನಂತೆ ಕಂಡರೆ ಗುರುತು ಹಚ್ಚಬಹುದಾದ ೧೦ ಮಂದಿ ವಿರುದ್ಧವೂ, ಮಜಿಬೈ ಲ್‌ನ ಡೆನ್ನಿಸ್(೨೫)ರಿಗೆ ಕುಂಜತ್ತೂ ರಿನಲ್ಲಿ ಹಲ್ಲೆಗೈದ ವಿರುದ್ಧ ೧೨ ಮಂದಿ ವಿರುದ್ಧವೂ ಮಂಜೇ ಶ್ವರದ ಅಬ್ದುಲ್ ಮಜೀದ್‌ರಿಗೆ ಸರಕಾರಿ ಕಾಲೇಜು ಬಳಿ ಹಲ್ಲೆಗೈದಿರುವುದಾಗಿ ನೀಡಿದ ದೂರಿನಂತೆ ಮೂರು ಮಂದಿ ವಿರುದ್ಧವೂ, ಕುಂಜತ್ತೂರು ಹೊಸ ಮನೆಯ ದಾಮೋದರ ಶೆಟ್ಟಿ(೫೨) ರನ್ನು ತಡೆದು ನಿಲ್ಲಿಸಿ ಹಲ್ಲೆಗೈದ ಕೇಸಿನಲ್ಲಿ ಮುಹಮ್ಮದ್ ಅಶ್ರಫ್, ಶರೀಫ್ ಎಂಬಿವರ ನೇತೃತ್ವದಲ್ಲಿ ೩೦ ಮಂದಿ ವಿರುದ್ಧವೂ ಸೇರಿ ಒಟ್ಟು ೫ ಕೇಸುಗಳನ್ನು ದಾಖಲಿಸಲಾಗಿದೆ. ಆರೋಪಿಗಳಿಗಾಗಿ ವ್ಯಾಪಕ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY