ಅಯೋಧ್ಯೆ ಪ್ರಕರಣ: ವಿಚಾರಣೆ ೨೯ಕ್ಕೆ ಮುಂದೂಡಿಕೆ

0
21

ಹೊಸದಿಲ್ಲಿ: ಎಲ್ಲರೂ ಕಾತರದಿಂದ ಕಾಯುತ್ತಿರುವ ಅಯೋಧ್ಯೆಯ ೨.೭೭ ಎಕ್ರೆ ಜಮೀನಿನ ಮಾಲಕತ್ವದ ಬಗ್ಗೆ ಅರ್ಜಿ ಮೇಲಿನ ವಾದ ಆಲಿಸುವಿಕೆ ಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪಂಚ ಸಂವಿಧಾನ ಪೀಠ ಈತಿಂಗಳ ೨೯ಕ್ಕೆ ಮುಂದೂಡಿದೆ.

ಇಂದು ಬೆಳಿಗ್ಗೆ ಈ ಪ್ರಕರಣದ ವಿಚಾರಣೆ ಪರಿಗಣನೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತ್ತು. ಆವೇಳೆ ನ್ಯಾಯಾಲಯದೊಳಗೆ ಮತ್ತು  ಸುತ್ತ ಮುತ್ತಲು ಬಿಗು ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ಇಂದು ಬೆಳಿಗ್ಗೆ ಆರಂಭ ಗೊಳ್ಳಲಿರುವಂತೆ ಈ ಪ್ರಕರಣ ಪರಿ ಗಣಿಸುತ್ತಿರುವ ಸಂವಿಧಾನಪೀಠದಲ್ಲಿ ನ್ಯಾಯಮೂರ್ತಿ ಯು.ಯು. ಲಲಿತ್ ರನ್ನು ಒಳಪಡಿಸಿರುವುದಕ್ಕೆ ಸುನ್ನಿ ವಕ್ಫ್  ಮಂಡಳಿ ತೀವ್ರ ವಿರೋಧ ವ್ಯಕ್ತಪಡಿ ಸಿತ್ತು. ಯು.ಯು. ಲಲಿತ್ ಈ ಹಿಂದೆ ಅಯೋಧ್ಯಾ ಘಟನಾವಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಪರವಾಗಿ ವಕೀಲರಾಗಿ ವಾದಿಸಿದ್ದರೆಂದೂ ಆ ಹಿನ್ನೆಲೆಯಲ್ಲಿ ಅವ ರನ್ನು ಸಂವಿಧಾನ ಪೀಠದಲ್ಲಿ ಒಳಪಡಿ ಸುವುದಕ್ಕೆ ತಮ್ಮ ವಿರೋಧವಿದೆಯೆಂದು ವಕ್ಫ್ ಮಂಡಳಿ ಪರ ವಕೀಲರು ಸುಪ್ರೀಂಕೋರ್ಟ್‌ನಲ್ಲಿ ಇಂದು ಬೆಳಿಗ್ಗೆ ತಿಳಿಸಿದ್ದಾರೆ. ಅದು ತಿಳಿದಾಕ್ಷಣ ನ್ಯಾಯಮೂರ್ತಿ ಯು.ಯು. ಲಲಿತ್ ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಂವಿಧಾನ ಪೀಠದಿಂದ ಹಿಂದಕ್ಕೆ ಸರಿಯುವುದಾಗಿ ತಿಳಿಸಿದರು.  ನ್ಯಾಯ ಮೂರ್ತಿ ಯು.ಯು. ಲಲಿತ್ ಸಂ ವಿಧಾನಪೀಠದಿಂದ ಹಿಂದಕ್ಕೆ ಸರಿದ ಹಿನ್ನೆಲೆಯಲ್ಲಿ ಈ ಪ್ರಕರಣದ ವಾದ ಇಂದು ಆರಂಭಿಸುವಂತಿಲ್ಲವೆಂದು ತಿಳಿಸಿದ ಮುಖ್ಯನ್ಯಾಯಮೂರ್ತಿ ರಂ ಜನ್ ಗೊಗೋಯ್ ವಾದ ಆಲಿಸು ವಿಕೆಯನ್ನು ೨೯ಕ್ಕೆ ಮುಂದೂಡಿದರು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಹೊರತಾಗಿ ನ್ಯಾಯ ಮೂರ್ತಿಗಳಾದ ಎಸ್.ಎ ಬೋಬ್ಡೆ, ಎನ್.ವಿ.  ರಮಣ, ಡಿ.ವೈ.  ಚಂದ್ರ ಚೂಡ್ ಮತ್ತು ಯು.ಯು. ಲಲಿತ್ ರನ್ನೊಳಗೊಂಡ ಸುಪ್ರೀಂಕೋರ್ಟ್‌ನ ಪಂಚ ಪೀಠವನ್ನು ಈ ಪ್ರಕರಣದ ವಿಚಾರಣೆಗಾಗಿ ನೇಮಿಸಲಾಗಿತ್ತು. ಅದರಿಂದ ನ್ಯಾಯಮೂರ್ತಿ ಲಲಿತ್ ಈಗ ಹಿಂದಕ್ಕೆ ಸರಿದಿರುವ ಹಿನ್ನೆಲೆಯಲ್ಲಿ ಅವರ ಬದಲು ಪರ್ಯಾಯ ನ್ಯಾಯಾಧೀಶರನ್ನು ನೇಮಿಸಬೇಕಾಗಿ ಬರಲಿದೆ.

NO COMMENTS

LEAVE A REPLY