ಮಂಜೇಶರದಲ್ಲಿ ರಾತ್ರಿ ೧೦ರ ಬಳಿಕ ವ್ಯಾಪಾರ ಸಂಸ್ಥೆ ಮುಚ್ಚಲು ಪೊಲೀಸ್ ನಿರ್ದೇಶ: ದ್ವಿಚಕ್ರವಾಹನ ಸಂಚಾರಕ್ಕೆ  ತಡೆ

0
26

ಮಂಜೇಶ್ವರ: ಇತ್ತೀಚೆಗಿನಿಂದ ಮಂಜೇಶ್ವರದ ವಿವಿಧೆಡೆ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮವನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.

ಮಂಜೇಶ್ವರ ತಾಲೂಕಿನ ವಿವಿಧೆಡೆ ಇತ್ತೀಚೆಗೆ ವ್ಯಾಪಕ ಘರ್ಷಣೆ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಸಂಬಂಧ ಹಲವರ ವಿರುದ್ಧ ಕೇಸು ದಾಖಲಿಸಲಾಗಿದೆ. ಹಲವರನ್ನು  ಬಂ ಧಿಸಿ, ಇನ್ನೂ ಹಲವರನ್ನು ಬಂಧಿಸಲು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಅವರಿ ಗಾಗಿ ಶೋಧ ಮುಂದುವರಿಸಲಾಗಿದೆ. ಇದೇ ವೇಳೆ ನಿನ್ನೆ ಮಂಜೇಶ್ವರದಲ್ಲಿ ಪೊಲೀಸರು ಧ್ವನಿವರ್ಧಕ ಮೂಲಕ ಜಾಗ್ರತಾ ನಿರ್ದೇಶ ನೀಡಿದ್ದಾರೆ. ಇದರಂತೆ ಮಂಜೇಶ್ವರ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ೧೦ ಗಂಟೆಗೆ ಎಲ್ಲಾ ಹೋಟೆಲ್ ಸಹಿತ ವ್ಯಾಪಾರ ಸಂಸ್ಥೆಗಳನ್ನು ಮುಚ್ಚುಗಡೆಗೊಳಿಸಬೇಕು, ರಾತ್ರಿ ೧೦ರ ಬಳಿಕ ದ್ವಿಚಕ್ರ ವಾಹನಗಳಲ್ಲಿ ಯಾರೂ ಸಂಚರಿಸಕೂಡದೆಂದೂ, ಯಾರಾದರೂ ಕಂಡುಬಂದಲ್ಲಿ ಅವ ರನ್ನು ಬಂಧಿಸಲಾಗು ವುದು ಹಾಗೂ ಜನರು ಗುಂಪುಗೂಡಿ ನಿಲ್ಲದಂತೆ ಪೊಲೀಸರು ಧ್ವನಿವರ್ಧಕ ಮೂಲಕ ಘೋಷಣೆ ಹೊರಡಿಸಿದ್ದಾರೆ.

NO COMMENTS

LEAVE A REPLY