ಲೋಕಸಭಾ ಚುನಾವಣೆಗೆ ಸಿದ್ಧತೆ: ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆ ಆರಂಭ

0
34

ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಕೊನೆಯ ಹಂತವಾದ ಸಿದ್ಧತೆಗಳನ್ನು ನಡೆಸುವ ಅಂಗವಾಗಿ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆ ಇಂದು ದೆಹಲಿಯಲ್ಲಿ ಆರಂಭಗೊಂ ಡಿತು. ಇಂದು ಹಾಗೂ ನಾಳೆ ನಡೆಯುವ ಸಭೆಯಲ್ಲಿ ದೇಶದ ವಿವಿಧ ಭಾಗಗಳಿಂದಾಗಿ ಹನ್ನೆರಡು ಸಾವಿರದಷ್ಟು ಪ್ರತಿನಿಧಿಗಳು ಭಾಗವಹಿಸುವರು. ಕೇರಳದಿಂದ ಇನ್ನೂರರಷ್ಟು ಮಂದಿ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆಯುವ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಾತನಾಡಲಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಮುಂದುವರಿದ ವಿಭಾಗಗಳಿಗೆ ಹತ್ತು ಶೇಕಡಾ ಮೀಸಲಾತಿ ಮಂಜೂರು ಮಾಡಿದ ಐತಿಹಾಸಿಕ ನಿರ್ಧಾರದ ಹಿನ್ನೆಲೆಯಲ್ಲಿ ನಡೆಯುವ ಈ ರಾಷ್ಟ್ರೀಯ ಕೌನ್ಸಿಲ್ ಸಭೆಗೆ ಹೆಚ್ಚಿನ ಪ್ರಾಧಾನ್ಯತೆ ಕಲ್ಪಿಸಲಾಗಿದೆ. ಲೋಕಭಾ ಚುನಾವಣೆಯ ಸಿದ್ಧತೆ ಪ್ರಧಾನ ಚರ್ಚಾ ವಿಷಯವಾಗಿದ್ದರೂ, ಶಬರಿಮಲೆಯ ವಿಷಯಕ್ಕೆ ಸಂಬಂಧಿಸಿ ಇದೀಗ ನೆಲೆಗೊಂಡಿರುವ ವಿವಾದವೂ ಚರ್ಚೆಗೆ ಬರುವ ಸಾಧ್ಯತೆಯಿದೆ ಯೆನ್ನಲಾಗುತ್ತಿದೆ.

ಇಂದು ಸಂಜೆ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭಾಷಣ ಮಾಡುವರು. ನಾಳೆ ಬೆಳಿಗ್ಗಿನಿಂದ ನಡೆಯುವ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ  ಉಪಸ್ಥಿತರಿರುವರು.

ಮಿಷನ್ ೨೦೧೯ಕ್ಕಾಗಿ ದೇಶಾದ್ಯಂತ ಪಕ್ಷದ ಎಲ್ಲಾ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಈ ಸಭೆ ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ಚುನಾವಣಾ ಮೈತ್ರಿ, ಲೋಕಸಬಾ ಕ್ಷೇತ್ರಗಳಲ್ಲಿ ಚುನಾವಣಾ ಸಿದ್ಧತೆ ಮೊದಲಾದವುಗಳ ಬಗ್ಗೆ ಚರ್ಚೆ ನಡೆಯಲಿದೆ. 

NO COMMENTS

LEAVE A REPLY