೨೦೧೧ರ ಎಡರಂಗ ಸರಕಾರದ ೨೦೯ ಖೈದಿಗಳ ಬಿಡುಗಡೆ ಕ್ರಮ ರದ್ದುಪಡಿಸಿ ಹೈಕೋರ್ಟು ತೀರ್ಪು

0
38

ತಿರುವನಂತಪುರ: ಕೊಲೆ ಪ್ರಕರಣದ ಆರೋಪಿಗಳು ಸೇರಿದಂತೆ ರಾಜ್ಯದ ವಿವಿಧ ಜೈಲುಗಳಲ್ಲಿ ಶಿಕ್ಷೆ ಅನುಭವಿಸಿದ ೨೦೯ ಖೈದಿಗಳಿಗೆ ಶಿಕ್ಷೆಯಲ್ಲಿ ರಿಯಾ ಯಿತಿ ನೀಡಿ ೨೦೧೧ರ ಎಡರಂಗ ಸರಕಾರ ಬಿಡುಗಡೆಗೊಳಿಸಿದ ಕ್ರಮವನ್ನು ಕೇರಳ ರಾಜ್ಯ ಹೈಕೋರ್ಟ್‌ನ ಪೂರ್ಣ ಪೀಠ ರದ್ದುಪಡಿಸಿ ಆದೇಶ ಹೊರಡಿಸಿದೆ.

ಮಹಾತ್ಮಾಗಾಂಧಿಯವರ ೧೫೦ನೇ ಜನ್ಮದಿನಾಚರಣೆಯ ಅಂಗವಾಗಿ ರಾಜ್ಯದ ವಿವಿಧ ಜೈಲುಗಳಲ್ಲಿ ಕೊಲೆ ಪ್ರಕರಣಗಳು ಸೇರಿದಂತೆ ಇತರ ಪ್ರಕರಣಗಳಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಶಿಕ್ಷೆ ಅನುಭವಿಸುತ್ತಿದ್ದ ೨೦೯ ಖೈದಿಗಳನ್ನು ರಾಜ್ಯಸರಕಾರ ಬಿಡುಗಡೆಗೊಳಿಸಿತ್ತು. ಅದರಂತೆ ಕಾಸರಗೋಡು ಜಿಲ್ಲೆಯ ಚೀಮೇನಿ ತೆರೆದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ೨೮ ಮಂದಿ, ಕಣ್ಣೂರು ಸೆಂಟ್ರಲ್ ಜೈಲಿನಿಂದ ೪೫, ಪೂಜಾಪುರ ಸೆಂಟ್ರಲ್ ಜೈಲಿನಿಂದ ೨೮ ಮಂದಿ, ಮಹಿಳಾ ಜೈಲಿನಿಂದ ೧ ಮತ್ತು ಇತರ ಜೈಲುಗಳಲ್ಲಾಗಿ ಹತ್ತುವರ್ಷಕ್ಕಿಂತ ಹೆಚ್ಚು ಸೆರೆಮನೆ ವಾಸ ಅನುಭವಿಸಿದ್ದ ೨೦೯ ಖೈದಿಗಳನ್ನು ರಾಜ್ಯ ಸರಕಾರ ಬಿಡುಗಡೆಗೊಳಿಸಿತ್ತು.

ಹೀಗೆ ಬಿಡುಗಡೆಗೊಂಡವರಲ್ಲಿ  ೧೦೦ರಷ್ಟು ಮಂದಿ ೧೦ ವರ್ಷಕ್ಕಿಂತ ಕೆಳಗೆ ಶಿಕ್ಷೆ ಅನುಭವಿಸಿದವರಾಗಿದ್ದಾ ರೆಂದೂ ೧೪ ವರ್ಷ ಶಿಕ್ಷೆ ಅನುಭವಿಸಿ ದವರು ಕೇವಲ  ೪ ಮಂದಿ ಮಾತ್ರವೇ ಆಗಿದ್ದಾರೆಂದು ಹೈಕೋರ್ಟ್ ನಡೆಸಿದ ಪರಿಶೀಲನೆಯಲ್ಲಿ ಸ್ಪಷ್ಟಗೊಂಡಿದೆ.

೧೪ ವರ್ಷ ಜೈಲು ಶಿಕ್ಷೆ ಅನುಭವಿಸಿದವರನ್ನು ಮಾತ್ರವೇ ಬಿಡುಗಡೆಗೊಳಿಸಲಾಗಿದೆ ಎಂದು ಈಹಿಂದೆ ಸರಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಅದು ಸರಿಯಲ್ಲವೆಂದು ನ್ಯಾಯಾಲಯ ತಿಳಿಸಿದೆ. ಹೀಗೆ ಜೈಲಿನಿಂದ ಸರಕಾರ ಬಿಡುಗಡೆಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಕೊಲೆಗೈಯ್ಯಲ್ಪಟ್ಟ ವ್ಯಕ್ತಿಗಳ ಹಲವು ಸಂಬಂಧಿಕರು ಮತ್ತು ಸಾಮಾಜಿಕ ಕಾರ್ಯಕರ್ತರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಬಗ್ಗೆ ಹೈಕೋ ರ್ಟ್ ಸ್ವಯಂ ಆಗಿ ನಾಲ್ಕು ಕೇಸು ದಾಖ ಲಿಸಿಕೊಂಡಿತ್ತು. ಎಲ್ಲಾ ಅರ್ಜಿಗಳನ್ನು ಕೂಲಂಕುಷ ವಾಗಿ ಪರಿಶೀಲಿಸಿದ ಬಳಿಕ ಖೈದಿಗಳ ಬಿಡುಗಡೆಯನ್ನು ರದ್ದುಪಡಿಸಿ ಹೈಕೋರ್ಟ್‌ನ ಪೂರ್ಣಪೀಠ ಇಂದು ಬೆಳಿಗ್ಗೆ ತೀರ್ಪು ನೀಡಿದೆ.

NO COMMENTS

LEAVE A REPLY