ಜೆಸಿಬಿ ಚಾಲಕನೊಂದಿಗೆ ಪರಾರಿಯಾದ ಯುವತಿ ಠಾಣೆಯಲ್ಲಿ ಹಾಜರು

0
31

ಹೊಸದುರ್ಗ: ಜೆಸಿಬಿ ಚಾಲಕ ನೊಂದಿಗೆ ಪರಾರಿಯಾದ ಗಲ್ಫ್ ಉದ್ಯೋಗಿಯ ಪತ್ನಿ ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದಾಳೆ. ಕಾಲಿಚ್ಚಾಮರದ ಸಜಿತ (೩೩) ಎಂಬಾಕೆ ಅಂಬಲತ್ತರ ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದಾಳೆ. ನ್ಯಾಯಾಲಯದಲ್ಲಿ ಹಾಜರು ಪಡಿಸಿದ ಯುವತಿಯನ್ನು ಹೊಸ ದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (ದ್ವಿತೀಯ) ಸ್ವಂತ ಇಚ್ಛೆ ಪ್ರಕಾರ ಬಿಟ್ಟಿದೆ. ನ್ಯಾಯಾ ಲಯದಿಂದ ಹೊರಕ್ಕೆ ಬಂದ ಸಜಿತ್ ಪ್ರಿಯತಮನಾದ ಮನು ಎಂಬಾತನೊಂದಿಗೆ ತೆರಳಿದ್ದಳು. ಸಜಿತಳ ಪತಿ ಗೋವಿಂದನ್ ಗಲ್ಫ್‌ನಲ್ಲಿದ್ದಾರೆ. ಈ ಮಧ್ಯೆ ಪತಿ ಮನೆ ಬಳಿ ಕೆಲಸಕ್ಕೆ ತಲುಪಿದ ಜೆಸಿಬಿ ಚಾಲಕನೊಂದಿಗೆ ಇತ್ತೀಚೆಗೆ ಯುವತಿ ಪರಾರಿಯಾಗಿದ್ದಳು.

NO COMMENTS

LEAVE A REPLY