ಜೆಡಿಯು, ಜೆಎಸ್ಎಸ್, ಆರ್.ಎಸ್.ಪಿ. ಆಂತರಿಕ ಕಲಹ: ಐಕ್ಯರಂಗದಲ್ಲಿ ಬಿರುಕು

0
269

ತಿರುವನಂತಪುರ: ಬಾರ್ ಲಂಚ  ಹಗರಣದಲ್ಲಿ ಕೇರಳ ಕಾಂಗ್ರೆಸ್(ಎಂ) ಮುಖ್ಯಸ್ಥ ಕೆ. ಎಂ. ಮಾಣಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದುದು ಐಕ್ಯರಂಗಕ್ಕೆ ತೀವ್ರ ಹೊಡೆತ ನೀಡಿದ ಬೆನ್ನಲ್ಲೇ ಇದೀಗ ಇನ್ನೊಂದು ಮೈತ್ರಿ ಪಕ್ಷ ಜೆಡಿಯು ಮಧ್ಯೆ ಆಂತರಿಕ ಕಲಹ ಒಕ್ಕೂಟಕ್ಕೆ ಮತ್ತೊಂದು ಪೆಟ್ಟು ಕೊಟ್ಟಂತಾಗಿದೆ.

ಜೆಡಿಯು ರಾಜ್ಯಾಧ್ಯಕ್ಷ ಎಂ. ಪಿ. ವೀರೇಂದ್ರ ಕುಮಾರ್ ಅವರು ಎಡರಂಗದತ್ತ ವಾಲುತ್ತಿರುವುದು ಐಕ್ಯರಂಗದ ಘಟಕ ಪಕ್ಷಗಳ ಮಧ್ಯೆ ಸಮನ್ವಯದ ಕೊರತೆ ಕಂಡು ಬಂದಿದೆ. ವೀರೇಂದ್ರ ಕುಮಾರ್ ಅವರ ನಡೆಯನ್ನು ಸಚಿವ ಕೆ. ಪಿ ಮೋಹನನ್ ಟೀಕಿಸಿದುದು ಪಕ್ಷ ಇಬ್ಭಾಗದತ್ತ ಸಾಗಲಿದೆ ಎಂಬುದನ್ನು ಸೂಚಿಸಿದೆ. ಅಸೆಂಬ್ಲಿ ಚುನಾವಣೆ ಸಮೀಪಿಸಿಸುತ್ತಿರುವಂತೆ ಘಟಕ ಪಕ್ಷಗಳೊಳಗಿನ ಆಂತರಿಕ ಕಲಹ ಐಕ್ಯರಂಗಕ್ಕೆ ತಲೆನೋವಾಗಿ ಪರಿಣಮಿಸಿದೆ. ಐಕ್ಯರಂಗದ ಇತರ ಘಟಕ ಪಕ್ಷಗಳಾದ ಜೆ.ಎಸ್.ಎಸ್ ಹಾಗೂ ಆರ್.ಎಸ್.ಪಿಯಲ್ಲೂ ಆಂತರಿಕ ಕಚ್ಚಾಟ ರೂಕ್ಷಗೊಂಡಿದೆ. ಸಚಿವ ಮಾಣಿಯವರ ಒತ್ತಾಯಪೂರ್ವಕ ರಾಜೀನಾಮೆಯ ಬಳಿಕ ಇವರ ಕೇರಳ ಕಾಂಗ್ರೆಸ್(ಎಂ) ಐಕ್ಯರಂಗದೊಂದಿಗೆ ಮುನಿಸುಗೊಂಡಿದೆ. ಇತ್ತೀಚೆಗೆ ನಡೆದ ಐಕ್ಯರಂಗ ಸಮನ್ವಯ ಸಭೆಯಲ್ಲಿ ಕೇರಳ ಕಾಂಗ್ರೆಸ್(ಎಂ) ಭಾಗವಹಿಸಿಲ್ಲ. 

ಕಾಂಗ್ರೆಸ್‌ನೊಳಗಿನ ಗುಂಪುಗಾರಿಕೆ ಇತ್ತೀಚೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ನಡೆದ ಚರ್ಚೆ ಬಳಿಕ ತಾತ್ಕಾಲಿಕವಾಗಿ ಪರಿಹಾರಗೊಂಡಿತ್ತು. ಆದರೆ ಘಟಕ ಪಕ್ಷಗಳೊಳಗಿನ ಬಿಕ್ಕಟ್ಟು ಐಕ್ಯರಂಗ ಪಕ್ಷಕ್ಕೆ ಧಕ್ಕೆ ತಂದಿದೆ.

NO COMMENTS

LEAVE A REPLY