ಯುವಕನನ್ನು ಮನೆಯಿಂದ ಕೊಂಡೊಯ್ದು ಹಲ್ಲೆ: ೨೦ ಮಂದಿ ವಿರುದ್ಧ ಕೇಸು

0
38

ಬದಿಯಡ್ಕ: ಯುವಕನನ್ನು ತಂಡವೊಂದು ಬವಂತವಾಗಿ ಮನೆಯಿಂದ ಕರೆದೊಯ್ದು ಹಲ್ಲೆಗೈದ ಆರೋಪದಂತೆ ಬದಿಯಡ್ಕ ಪೊಲೀ ಸರು ಕೇಸು ದಾಖಲಿಸಿಕೊಂಡಿದ್ದಾರೆ.

ಬೆಳಿಂಜ ನಿವಾಸಿ ಅಬ್ದುಲ್ ಖಾದರ್(೩೫) ನೀಡಿದ ದೂರಿನಂತೆ ಕುಂಞಾಲಿ, ಮುನೀರ್, ನೌಶಾದ್, ಹೈದರ್, ಅಶ್ರಫ್ ಎಂಬವರ ಸಹಿತ ೨೦ ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಮೊನ್ನೆ ಮಧ್ಯಾಹ್ನ ತಂಡವೊಂದು ಅಬ್ದುಲ್ ಖಾದರ್ ರನ್ನು ಮನೆಯಿಂದ ಬಲವಂತವಾಗಿ ಕರೆದೊಯ್ದು ನೆರೆ ಮನೆಯ ಅಂಗಳಕ್ಕೆ ತಲುಪಿಸಿ ಅಲ್ಲಿ ಹಲ್ಲೆಗೈ ದುದಾಗಿ ದೂರಲಾಗಿದೆ. ಹಲ್ಲೆಯಿಂದ ಗಾಯಗೊಂಡ ಅಬ್ದುಲ್ ಖಾದರ್ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

NO COMMENTS

LEAVE A REPLY