ಹರತಾಳದಂದು ಘರ್ಷಣೆ: ಮತ್ತೆ ೭ ಮಂದಿ ಸೆರೆ

0
37

ಕುಂಬಳೆ: ಇತ್ತೀಚೆಗೆ ಹರತಾಳದಂದು ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿ ಮತ್ತೆ ಏಳು ಮಂದಿಯನ್ನು ಕುಂಬಳೆ ಪೊಲೀಸರು ಸೆರೆಹಿಡಿದಿದ್ದಾರೆ.

ಬಂದ್ಯೋಡಿನಲ್ಲಿ ನಡೆದ ಘರ್ಷಣೆ ವೇಳೆ ಪೊಲೀಸರ ಮೇಲೆ ಕಲ್ಲೆಸೆತ ಆರೋಪದಂತೆ ಬಂದ್ಯೋಡಿನ ಪ್ರದೀಪ್ ಕುಮಾರ್ (೨೩)ನನ್ನು ಬಂಧಿಸಲಾಗಿದೆ.  ಶಿರಿಯ ಶಾಲೆ ಬಳಿ ಅಹಮ್ಮದ್ ಸಕರುದ್ದೀನ್‌ರಿಗೆ ಹಲ್ಲೆಗೈದ ಆರೋಪದಂತೆ ಶಿರಿಯ ಶಾಲೆ ಬಳಿಯ ನಿವಾಸಿಗಳಾದ ದಿವಾಕರ (೪೮), ಕೃಷ್ಣ (೩೮), ಚಂದ್ರಹಾಸ (೪೦), ಕಾರ್ತಿಕ ಕೆ.ಎಸ್. (೨೦), ಕಾರ್ತಿಕ್.ಕೆ (೨೦), ರಾಜೇಶ್ (೨೮) ಎಂಬಿವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY