ಶಬರಿಮಲೆ ದರ್ಶನಕ್ಕೆ ಆಗಮಿಸುವುದಾಗಿ ವ್ಯಾಪಕ ಪ್ರಚಾರ: ಸದ್ಯ ಇಲ್ಲ ಎಂದ ತೃಪ್ತಿ ದೇಸಾಯಿ

0
41

ಶಬರಿಮಲೆ: ಕ್ಷೇತ್ರ ದರ್ಶನಕ್ಕೆ ನಾನು ಮತ್ತೆ ಬರುತ್ತೇನೆಂಬ ರೀತಿಯಲ್ಲಿ ಮತ್ತು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸುತ್ತಿರುವುದು ಸರಿಯಲ್ಲವೆಂ ದು ಪುಣೆಯ ಭೂಮಾತಾ ಬ್ರಿಗೇಡ್ ನೇತಾರೆ ತೃಪ್ತಿ ದೇಸಾಯಿ ತಿಳಿಸಿದ್ದಾರೆ.

ಮಕರಜ್ಯೋತಿ ಸಮಯದಲ್ಲಿ ನಾನು ಶಬರಿಮಲೆ ಮೆಟ್ಟಿಲೇರಲು ಇಚ್ಛಿಸುವುದಿಲ್ಲ. ಈ ಋತುವಿನಲ್ಲಿ ನಾನು ಶಬರಿಮಲೆ ದರ್ಶನಕ್ಕಾಗಿ ಮತ್ತೆ ಬರುವೆನೆಂಬ  ರೀತಿಯಲ್ಲಿ ನಡೆಸುತ್ತಿರುವ ಪ್ರಚಾರಗಳ ಹಿಂದೆ ನಿಗೂಢತೆ ಅಡಗಿದೆಯೆಂದು ತೃಪ್ತಿ ದೇಸಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಶಬರಿಮಲೆಗೆ ಯುವತಿಯರ ಪ್ರವೇಶಕ್ಕೆ ದಾರಿ ಕಲ್ಪಿಸಿಕೊಡಲಾಗಿದೆ. ಅದರಂತೆ ಕೆಲವು ಯುವತಿಯರು ಈಗಾಗಲೇ ಶಬರಿಮಲೆ ದರ್ಶನ ನಡೆಸಿ ಗುರಿ ಸಾಧಿಸುವಲ್ಲಿ ಸಫಲರಾಗಿದ್ದಾರೆಂದು ತೃಪ್ತಿ ತಿಳಿಸಿದ್ದಾರೆ.

ಭೂಮಾತಾ ಬ್ರಿಗೇಡ್‌ಗೆಸೇರಿದ ಕೆಲವು ಯುವತಿಯರೊಂದಿಗೆ ಶಬರಿಮಲೆ ದರ್ಶ ನಕ್ಕಾಗಿ  ತೃಪ್ತಿ ದೇಸಾಯಿ ಕಳೆದ ನವೆಂಬರ್‌ನಲ್ಲಿ ಮುಂಬೈಯಿಂದ ನೆಡುಂಬಾಶ್ಶೇರಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ಆಗ ಅಲ್ಲಿ ಅಯ್ಯಪ್ಪ ಭಕ್ತರಿಂದ ಭುಗಿಲೆದ್ದ ಭಾರಿ ಪ್ರತಿಭಟನೆ ಯಿಂದಾಗಿ ತೃಪ್ತಿ  ಮತ್ತು ಸಂಗಡಿಗರು ವಿಮಾನ ನಿಲ್ದಾಣದಿಂದ ಹೊರಬರಲು ಸಾಧ್ಯವಾಗದೆ ಗಂಟೆಗಳ ಕಾಲ ಅಲ್ಲೇ ಉಳಿದುಕೊಂಡರು. ಪ್ರತಿಭಟನೆ ತೀವ್ರಗೊಂಡಾಗ  ಅವರು ಶಬರಿಮಲೆ ದರ್ಶನ ಕೈಬಿಟ್ಟು ಅಲ್ಲಿಂದಲೇ ಮರಳಬೇಕಾದ ಸ್ಥಿತಿಯುಂಟಾಯಿತು.

ತೃಪ್ತಿ ದೇಸಾಯಿ ಮಕರಜ್ಯೋತಿ ವೇಳೆ ಶಬರಿಮಲೆ ದರ್ಶನಕ್ಕಾಗಿ ಮತ್ತೆ ಕೋಟ್ಟಯಂಗೆ ತಲುಪಿರುವುದಾಗಿ ಅಲ್ಲಿಂದ ಯಾವುದೇ ಕ್ಷಣದಲ್ಲಿ ಮಲೆ ಮೆಟ್ಟಿಲೇರುವ ಸಾಧ್ಯತೆಯಿದೆಯೆಂಬ ವ್ಯಾಪಕ ಪ್ರಚಾರ ಸಾಮಾಜಿಕ ಜಾಲತಾಣಗಳಲ್ಲಿ  ಉಂಟಾ ಗಿತ್ತು. ಆ ಹಿನ್ನೆಲೆಯಲ್ಲಿ ಪೊಲೀಸರು ಶಬರಿಮಲೆ ಮತ್ತು ಪರಿಸರ ಪ್ರದೇಶಗಳಲ್ಲಿ ಇನ್ನಷ್ಟು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಪ್ರತಿಭಟನೆಗಾರರು ಅಗತ್ಯದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇಂತಹ ಸಂದರ್ಭದಲ್ಲಿ ಸದ್ಯ ತಾನು ಶಬರಿಮಲೆ ಸಂದರ್ಶಿಸುವ ಉದ್ದೇಶ ಹೊಂದಿಲ್ಲ. ನಾನು ಈಗ ಪುಣೆಯಲ್ಲೇ ಇದ್ದೇನೆ . ಮುಂದೆ ಎಂದಾದರೂ ಶಬರಿಮಲೆ ದರ್ಶನ ನಡೆಸುವೆ ಎಂದು ತೃಪ್ತಿ ಸ್ಪಷ್ಟಪಡಿಸಿದ್ದಾರೆ.

ಆದರೆ ತೃಪ್ತಿಯ ಈ ಹೇಳಿಕೆ ಸತ್ಯವೇ ಅಥವಾ ಭಕ್ತರ ಗಮನ ಬೇರೆಡೆ ತಿರುಗಿ ಗುಪ್ತವಾಗಿ ಶಬರಿಮಲೆ ದರ್ಶನ ನಡೆಸಲಿರುವ ತಂತ್ರವೇ  ಎಂಬ ಶಂಕೆ ಅಯ್ಯಪ್ಪ ಭಕ್ತರನ್ನು ಕಾಡತೊಡಗಿದೆ.

NO COMMENTS

LEAVE A REPLY